ಕೇರಳ: ಕುರ್ ಆನ್ ಪಠಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ 4ನೇ ತರಗತಿ ವಿದ್ಯಾರ್ಥಿನಿ ಪಾರ್ವತಿ

Update: 2022-11-23 07:45 GMT

ತಿರುವನಂತಪುರ: ಕೇರಳದ (Kerala) ಕೋಝಿಕ್ಕೋಡ್ ನಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕುರ್ ಆನ್ ಪಠಣ (Quran recitation) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಎಲ್ಲರ  ಗಮನ ಸೆಳೆದಿದ್ದಾಳೆ.

ಬಾಲಕಿ ಪಾರ್ವತಿ ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದರೂ ಕುರ್ ಆನ್ ಪಠಣ ಸ್ಪರ್ಧೆಯಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಬಹುಮಾನವನ್ನು ಗೆಲ್ಲುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದಳು.

ಕೋಝಿಕ್ಕೋಡ್ ನಲ್ಲಿ ನಡೆದ ತೊಡನ್ನೂರು ಉಪಜಿಲ್ಲಾ ಕಲಾಮೇಳದಲ್ಲಿ ಬಾಲಕಿ ಈ ಸಾಧನೆ ಮಾಡಿದ್ದಾಳೆ. ಪಾರ್ವತಿ ಚೆಮ್ಮರತೂರ್ ಎಲ್ಪಿ ಶಾಲೆಯಲ್ಲಿ ಓದುತ್ತಿದ್ದಾಳೆ. ಪಾರ್ವತಿಯ ಅವಳಿಸಹೋದರಿ ಪಾರ್ವನಾ ಕೂಡಾ ಅರೇಬಿಕ್ ಭಾಷೆಯಲ್ಲಿಯೂ ಚೆನ್ನಾಗಿ ಮಾತನಾಡುತ್ತಾರೆ. ಸಹೋದರಿಯರಿಬ್ಬರು ತಮ್ಮ ಶಾಲೆಯ ಶಿಕ್ಷಕರಾದ ರುಖೈಯಾ ಅವರಿಂದ ಅರೇಬಿಕ್ ಕಲಿತ್ತಿದ್ದಾರೆ.

ಪಾರ್ವತಿಯ ತಂದೆ ನಲಿಶ್ ಬಾಬಿ ಕೋಝಿಕ್ಕೋಡ್ನಲ್ಲಿ ಐಟಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ದಿನಾ ಪ್ರಭಾ ಇಂಗ್ಲಿಷ್ ಶಿಕ್ಷಕಿಯಾಗಿದ್ದಾರೆ. ಹೊಸ ಭಾಷೆ ಕಲಿಯುವುದು ಮುಖ್ಯ  ಎನ್ನುವುದು ಪಾರ್ವತಿಯ ಹೆತ್ತವರ ಅಭಿಮತ.

ಇದನ್ನೂ ಓದಿ: 'ಟಿಪ್ಪು‌ ನಿಜ ಕನಸುಗಳು' ಕೃತಿ ಮಾರಾಟಕ್ಕೆ ನಿರ್ಬಂಧ ವಿಧಿಸಿದ ಕೋರ್ಟ್‌

Similar News