ಸತತ 7ನೇ ಬಾರಿಗೆ ಸಂಸತ್‌ಗೆ ಆಯ್ಕೆಗೊಂಡ ನೇಪಾಳ ಪ್ರಧಾನಿ ದೆವುಬ

Update: 2022-11-23 17:09 GMT

ಕಠ್ಮಂಡು, ನ.23: ನೇಪಾಳದ ಪ್ರಧಾನಿ, ನೇಪಾಳ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದುರ್ ದೆವುಬ (Sher Bahadur Devaba)ತಮ್ಮ ತವರು ಜಿಲ್ಲೆ ಧನ್‌ಕೂಟದಿಂದ ಸತತ 7ನೇ ಬಾರಿಗೆ ಸಂಸತ್‌ಗೆ ಆಯ್ಕೆಗೊಂಡಿದ್ದಾರೆ.

ನವೆಂಬರ್ 20ರಂದು ನೇಪಾಳ ಸಂಸತ್‌ಗೆ ಹಾಗೂ ಪ್ರಾಂತೀಯ ಅಸೆಂಬ್ಲಿಗಳಿಗೆ ನಡೆದ ಚುನಾವಣೆಯಲ್ಲಿ 61% ಮತದಾನವಾಗಿದ್ದು ಮತ ಎಣಿಕೆ ಪ್ರಗತಿಯಲ್ಲಿದೆ ಎಂದು ನೇಪಾಳದ ಚುನಾವಣಾ ಆಯೋಗ ಮಾಹಿತಿ ನೀಡಿದೆ. 

Similar News