ಮೊರ್ಬಿ ಸೇತುವೆ ಕುಸಿತ ಪ್ರಕರಣ: ಸೇತುವೆಗಳ ಸ್ಥಿತಿಗತಿ ಕುರಿತ ವರದಿ ಸಲ್ಲಿಸಲು ಗುಜರಾತ್ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2022-11-24 17:58 GMT

 ಗಾಂಧಿನಗರ (ಗುಜರಾತ್), ನ. 24: ರಾಜ್ಯದ ಎಲ್ಲ ಸೇತುವೆಗಳ ಸಮೀಕ್ಷೆ ನಡೆಸುವಂತೆ ಹಾಗೂ ಅವುಗಳು ಸಮರ್ಪಕ ಸ್ಥಿತಿಯಲ್ಲಿರುವ ಕುರಿತು ಖಾತರಿ ನೀಡುವಂತೆ ಗುಜರಾತ್ ಉಚ್ಚ ನ್ಯಾಯಾಲ(Gujarat High Court)ಯ ರಾಜ್ಯ ಸರಕಾರಕ್ಕೆ ಗುರುವಾರ ನಿರ್ದೇಶಿಸಿದೆ.

ಕಳೆದ ತಿಂಗಳು 135 ಜನರು ಸಾವನ್ನಪ್ಪಲು ಕಾರಣವಾದ ಮೊರ್ಬಿ ಸೇತುವೆ(Morbi Bridge) ಕುಸಿತವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ಪ್ರತಿಯೊಂದು ಸೇತುವೆಯ ಸ್ಥಿತಿಗತಿಯ ಬಗ್ಗೆ ಪ್ರಮಾಣೀಕೃತ ವರದಿಯೊಂದಿಗೆ ಸೇತುವೆಗಳ ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಪರಿಹಾರದ ಕುರಿತು ಕೂಡ ಟೀಕಿಸಿದ ನ್ಯಾಯಾಲಯ, ಸಂತ್ರಸ್ತರ ಕುಟುಂಬಗಳಿಗೆ ನೀಡಲಾದ ಪರಿಹಾರ ಸಾಲದು ಎಂದು ಅಭಿಪ್ರಾಯಿಸಿತು. ಸಂತ್ರಸ್ತ ಕುಟುಂಬಗಳಿಗೆ ನೀಡಲಾದ ಪರಿಹಾರ ವಾಸ್ತವಿಕ ಹಾಗೂ ಸಮರ್ಪಕವಾಗಿರಬೇಕು ಎಂದು ಅದು ಹೇಳಿತು.

Similar News