ಸಚಿನ್ ಪೈಲಟ್ ವಿರುದ್ಧ ಅಶೋಕ್ ಗೆಹ್ಲೋಟ್ ವಾಗ್ದಾಳಿಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2022-11-25 08:09 GMT

ಹೊಸದಿಲ್ಲಿ:  NDTVಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ Ashok Gehlot ಅವರು ತಮ್ಮ ರಾಜಸ್ಥಾನದ ಪ್ರತಿಸ್ಪರ್ಧಿ ಸಚಿನ್ ಪೈಲಟ್ Sachin Pilot ಕುರಿತು ಬಳಸಿದ ಕೆಲವು ಪದಗಳು "ಅನಿರೀಕ್ಷಿತ" ಹಾಗೂ "ಆಶ್ಚರ್ಯಕರ" ಎಂದು ಕಾಂಗ್ರೆಸ್ ಹೇಳಿದೆ.

ಸಂದರ್ಶನದಲ್ಲಿ ಬಳಸಲಾದ ಕೆಲವು ಪದಗಳು ಅನಿರೀಕ್ಷಿತವಾಗಿವೆ. ಅನೇಕರು ಆಶ್ಚರ್ಯಚಕಿತರಾದರು. ಇಬ್ಬರು  ನಾಯಕರ ಭಿನ್ನಾಭಿಪ್ರಾಯ ಹೇಗೆ ಪರಿಹರಿಸಬೇಕೆಂದು ಕಾಂಗ್ರೆಸ್ ನಾಯಕತ್ವವು ಚರ್ಚಿಸುತ್ತದೆ. ನಮ್ಮದು ಒಂದು ಕುಟುಂಬ, ಕಾಂಗ್ರೆಸ್‌ಗೆ ಅಶೋಕ್ ಗೆಹ್ಲೋಟ್‌ರಂತಹ ಅನುಭವಿ ನಾಯಕ ಹಾಗೂ  ಸಚಿನ್ ಪೈಲಟ್‌ರಂತಹ ಶಕ್ತಿಯುತ ಯುವ ನಾಯಕ ಇಬ್ಬರೂ ಅಗತ್ಯವಿದೆ" ಎಂದು  ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ Congress leader Jairam Ramesh ಹೇಳಿದ್ದಾರೆ.

"ಗೆಹ್ಲೋಟ್ ಬಳಸಿದ ಪದಗಳಿಂದ ನನಗೂ ಆಶ್ಚರ್ಯವಾಗಿದೆ. ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ನಮ್ಮ ಪಕ್ಷದಲ್ಲಿ ಭಯದ ವಾತಾವರಣ ಇಲ್ಲ. ಜನರು ಮನಸ್ಸಿಗೆ ಬಂದಿದ್ದನ್ನು ಹೇಳುತ್ತಾರೆ. ಹೈಕಮಾಂಡ್ ಸರ್ವಾಧಿಕಾರಿಯಲ್ಲ" ಎಂದು ಅವರು ಹೇಳಿದರು.

ಇಬ್ಬರೂ ಹಿರಿಯ ನಾಯಕರು ಪಕ್ಷಕ್ಕೆ ನಿರ್ಣಾಯಕರು ಎಂದು ಹೇಳಿದ ಜೈರಾಮ್ ರಮೇಶ್ "ಸಂಘಟನೆಯೇ ಸರ್ವಶ್ರೇಷ್ಠವೇ ಹೊರತು ವ್ಯಕ್ತಿಗಳಲ್ಲ. ಯಾವುದೇ ಪರಿಹಾರವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದೀಗ, ದಕ್ಷಿಣದ ರಾಜ್ಯಗಳಂತೆ ಉತ್ತರ ಭಾರತದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಕರ್ತವ್ಯ" ಎಂದು ಮಾಜಿ ಕೇಂದ್ರ ಸಚಿವರು ಪ್ರತಿಪಾದಿಸಿದರು.

ಇತ್ತೀಚೆಗೆ  NDTVಗೆ ನೀಡಿದ ಸಂದರ್ಶನದಲ್ಲಿ ಸಚಿನ್ ಪೈಲಟ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದ ಗೆಹ್ಲೋಟ್ ಅವರು, ಪೈಲಟ್  ಅವರು ದೇಶದ್ರೋಹಿ. ಅವರು ಎಂದಿಗೂ ರಾಜಸ್ಥಾನದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು.

Similar News