ಶಿವಾಜಿ ಕುರಿತು ವಿವಾದಾತ್ಮಕ ಹೇಳಿಕೆ: ರಾಜ್ಯಪಾಲರ ಬೆಂಬಲಕ್ಕೆ ನಿಂತ ಉಪ ಮುಖ್ಯಮಂತ್ರಿ ಫಡ್ನವಿಸ್ ಪತ್ನಿ ಅಮೃತಾ

Update: 2022-11-25 09:13 GMT

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ Bhagat Singh Koshyari ಅವರು ಛತ್ರಪತಿ ಶಿವಾಜಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿರುವ ಮಧ್ಯೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ Amruta Fadnavis ರಾಜ್ಯಪಾಲರ ಬೆಂಬಲಕ್ಕೆ ನಿಂತಿದ್ದಾರೆ, ಇದು ರಾಜ್ಯ ಸರಕಾರವನ್ನು ಸಂದಿಗ್ಧತೆಗೆ ಸಿಲುಕಿಸುವ ಸಾಧ್ಯತೆಯಿದೆ.

"ರಾಜ್ಯಪಾಲರ ಬಗ್ಗೆ ನಾನು ವೈಯಕ್ತಿಕವಾಗಿ ತಿಳಿದುಕೊಂಡಿರುವೆ. ಅವರು ಮಹಾರಾಷ್ಟ್ರಕ್ಕೆ ಬಂದ ನಂತರ ಮರಾಠಿ ಕಲಿತರು. ಅವರು ಮರಾಠಿಗಳನ್ನು ನಿಜವಾಗಿಯೂ ಪ್ರೀತಿಸುತ್ತಾರೆ. ಇದು ನನ್ನ ಅನುಭವಕ್ಕೆ ಬಂದಿದೆ. ಆದರೆ ಅವರು ಏನಾದರೂ ಹೇಳಿದರೆ  ಅದಕ್ಕೆ  ಬೇರೆ ವ್ಯಾಖ್ಯಾನವನ್ನು ನೀಡುವ ಕೆಲಸ ಹಲವು ಬಾರಿ ನಡೆದಿದೆ. ಆದರೆ ಅವರು ಮರಾಠಿಗರ ಹೃದಯದಲ್ಲಿದ್ದಾರೆ" ಅಮೃತಾ ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದರು.

 ಕೋಶ್ಯಾರಿ ಅವರನ್ನು ತೆಗೆದುಹಾಕದಿದ್ದರೆ ಪಕ್ಷಾತೀತವಾಗಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆದರಿಕೆ ಹಾಕಿದರು.

"ಕೇಂದ್ರ ಸರಕಾರವು ಅಮೆಝಾನ್ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಿರುವ ಈ ರಾಜ್ಯಪಾಲರನ್ನು ಎರಡರಿಂದ ಐದು ದಿನಗಳಲ್ಲಿ ವಾಪಸ್ ಕರೆಸಿಕೊಳ್ಳದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ಅಥವಾ ಬಂದ್ ಅನ್ನು ನಡೆಸಲಾಗುವುದು" ಎಂದು ಉದ್ದವ್  ಠಾಕ್ರೆ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ನಿಮ್ಮ ಆರಾಧ್ಯಮೂರ್ತಿ ಯಾರು ಎಂದು ನಿಮ್ಮನ್ನು ಕೇಳಿದಾಗ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಹಾಗೂ  ಮಹಾತ್ಮ ಗಾಂಧಿ ಎಂಬ ಉತ್ತರಗಳು ಬರುತ್ತಿತ್ತು. ಮಹಾರಾಷ್ಟ್ರದಲ್ಲಿ  ಹಲವಾರು ಆರಾಧ್ಯಮೂರ್ತಿಗಳಿವೆ. ಛತ್ರಪತಿ ಶಿವಾಜಿ ಮಹಾರಾಜರು ಹಳೆಯ ದಿನಗಳ ಐಕಾನ್ ಆಗಿದ್ದರೆ, ಈಗ ಬಿ.ಆರ್. ಅಂಬೇಡ್ಕರ್ ಮತ್ತು ನಿತಿನ್ ಗಡ್ಕರಿ ಇದ್ದಾರೆ ಎಂದು ಕೋಶ್ಯಾರಿ ಕಳೆದ ಶನಿವಾರ ಹೇಳಿದ್ದರು.

Similar News