ಚೀನಾ: 30 ನಗರಗಳಲ್ಲಿ ಖಾಸಗಿ ಪಿಂಚಣಿ ಯೋಜನೆಗೆ ಚಾಲನೆ

Update: 2022-11-25 16:13 GMT

ಬೀಜಿಂಗ್, ನ.25: ಹಿರಿಯ ನಾಗರಿಕರ ಜನಸಂಖ್ಯೆ ಕ್ಷಿಪ್ರವಾಗಿ ಹೆಚ್ಚುತ್ತಿರುವಂತೆಯೇ ಪ್ರಥಮ ಖಾಸಗಿ ಪಿಂಚಣಿ ಯೋಜನೆ(Pension Scheme)ಗೆ  ಚೀನಾದ 36 ನಗರಗಳಲ್ಲಿ ಚಾಲನೆ ನೀಡಲಾಗಿದ್ದು ಈ ಮೂಲಕ ವ್ಯಕ್ತಿಗಳು ಠೇವಣಿಯಿಂದ ಹಿಡಿದು ಮ್ಯೂಚುವಲ್ ಫಂಡ್ವರೆಗೆ ಪಿಂಚಣಿ ಉತ್ಪನ್ನಗಳನ್ನು ಖರೀದಿಸಲು ಬ್ಯಾಂಕ್ ಗಳಲ್ಲಿ ನಿವೃತ್ತಿ ಖಾತೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ.

ಅಮೆರಿಕದಲ್ಲಿ ಜಾರಿಯಲ್ಲಿರುವ ವೈಯಕ್ತಿಕ ನಿವೃತ್ತಿ ಖಾತೆಗಳ(ಐಆರ್ಎ) ಚೀನಾ ಆವೃತ್ತಿ ಇದಾಗಿದೆ. ಪ್ರಥಮ ಹಂತದಲ್ಲಿ ಯೋಜನೆ ಜಾರಿಗೆ ಬರುವ ನಗರಗಳಲ್ಲಿ ಬೀಜಿಂಗ್, ಶಾಂಘೈ, ಗ್ವಾಂಗ್ಝೊ ಮತ್ತು ಚೆಂಗ್ಡು ಸೇರಿದೆ ಎಂದು ಮಾನವ  ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತಾ ಇಲಾಖೆ ಹೇಳಿದೆ.

ಚೀನಾದ ಸಾರ್ವಜನಿಕ ಪಿಂಚಣಿ ವಿಮೆಗೆ ಒಳಪಡುವ ಗೃಹ ಕಾರ್ಮಿಕರು ಈ ಯೋಜನೆಯಲ್ಲಿ ಭಾಗವಹಿಸಬಹುದು ಮತ್ತು ವ ರ್ಷಕ್ಕೆ 1,676 ಡಾಲರ್ನಷ್ಟು ಮೊತ್ತವನ್ನು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಬಹುದು ಮತ್ತು ತೆರಿಗೆ ಪ್ರಯೋಜನಗಳನ್ನು  ಪಡೆಯಬಹುದು. ಅಲ್ಲದೆ 23 ವಾಣಿಜ್ಯ ಬ್ಯಾಂಕ್ಗಳಲ್ಲಿ ವೈಯಕ್ತಿಕ ಪಿಂಚಣಿ ನಿಧಿ ಖಾತೆಯನ್ನೂ ತೆರೆಯಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

20  ವರ್ಷಗಳಲ್ಲಿ ಚೀನಾದ ಜನಸಂಖ್ಯೆಯ 28%ದಷ್ಟು 60 ವರ್ಷ ಮೀರಿದವರಾಗಲಿದ್ದು, ಈ ಮೂಲಕ ವಿಶ್ವದಲ್ಲಿ ಅತ್ಯಂತ ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ದೇಶಗಳ  ಸಾಲಿನತ್ತ  ಚೀನಾ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.  

Similar News