18ರ ವಯಸ್ಸಿನ ರೆಹಾನ್ ಅಹ್ಮದ್ ‘ಅತ್ಯಂತ ಪ್ರತಿಭಾವಂತ’ : ಬೆನ್ ಸ್ಟೋಕ್ಸ್

Update: 2022-11-25 17:37 GMT

ಲಂಡನ್, ನ.25: ಪಾಕಿಸ್ತಾನವನ್ನು ಡಿಸೆಂಬರ್‌ನಲ್ಲಿ ಎದುರಿಸಲಿರುವ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ 18ರ ಹರೆಯದ ರೆಹಾನ್ ಅಹ್ಮದ್(Rehan Ahmed) ಅತ್ಯಂತ ಪ್ರತಿಭಾವಂತ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes)ಅಭಿಪ್ರಾಯಪಟ್ಟಿದ್ದಾರೆ.

ಅಹ್ಮದ್ ಅವರು ರಾವಲ್ಪಿಂಡಿ, ಮುಲ್ತಾನ್ ಇಲ್ಲವೇ ಕರಾಚಿಯಲ್ಲಿ ತನ್ನ ದೇಶದ ಪರ ಆಡಿದರೆ ಇಂಗ್ಲೆಂಡ್‌ನ ಅತ್ಯಂತ ಕಿರಿಯ ವಯಸ್ಸಿನ ಟೆಸ್ಟ್ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆಲ್‌ರೌಂಡರ್ ಅಹ್ಮದ್ ಲೈಸೆಸ್ಟರ್‌ಶೈರ್ ಪರ ಕೇವಲ ಮೂರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

‘‘ನಾವು ಅವರನ್ನು ಓರ್ವ ಅಪರೂಪದ ಪ್ರತಿಭೆಯಾಗಿ ನೋಡಿದ್ದೇವೆ.  ಅವರು ತನ್ನ ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರೆಹಾನ್‌ರಂತಹ ಪ್ರತಿಭಾವಂತರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಒಂದು ಅವಕಾಶ ಎಂದು ಭಾವಿಸಿದ್ದೇವೆ’’ಎಂದು ‘ಸ್ಕೈ ಸ್ಪೋರ್ಟ್ಸ್’ಗೆ ಸ್ಟೋಕ್ಸ್ ತಿಳಿಸಿದ್ದಾರೆ.

Similar News