ವಿಶ್ವಕಪ್: ನೆದರ್‌ಲ್ಯಾಂಡ್ಸ್-ಇಕ್ವೆಡಾರ್ ಪಂದ್ಯ 1-1 ಡ್ರಾ

ಆತಿಥೇಯ ಖತರ್ ಟೂರ್ನಿಯಿಂದ ನಿರ್ಗಮನ

Update: 2022-11-25 18:13 GMT

   ದೋಹಾ, ನ.25: ಇಕ್ವೆಡಾರ್ ಹಾಗೂ ನೆದರ್‌ಲ್ಯಾಂಡ್ಸ್ ನಡುವಿನ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯವು 1-1 ರಿಂದ ಡ್ರಾನಲ್ಲಿ ಕೊನೆಗೊಂಡಿದೆ. ಈ ಫಲಿತಾಂಶದೊಂದಿಗೆ ಆತಿಥೇಯ ಖತರ್ ಟೂರ್ನಿಯಿಂದ ನಿರ್ಗಮಿಸಿದೆ.

ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರನೇ ನಿಮಿಷದಲ್ಲಿ ಗೋಲು ಗಳಿಸಿದ ಕೋಡಿ ಗಕ್ಪೋ ನೆದರ್‌ಲ್ಯಾಂಡ್ಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು.  

ಇಕ್ವೆಡಾರ್ ಆಟಗಾರ ಎನ್ನರ್ ವೆಲೆನ್ಸಿಯಾ 49ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಇಕ್ವೆಡಾರ್ ನಾಯಕ ವೆಲೆನ್ಸಿಯಾ ಮೂರನೇ ಗೋಲು ಗಳಿಸಿದರು.

ಖತರ್ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಎರಡೂ ಗೋಲುಗಳನ್ನು ಗಳಿಸಿದ್ದ ವೆಲೆನ್ಸಿಯಾ ಅವರು ತಂಡಕ್ಕೆ 2-0 ಗೆಲುವು ತಂದುಕೊಟ್ಟಿದ್ದರು.

Similar News