ಫಿಫಾ ವಿಶ್ವಕಪ್: ಅಮೆರಿಕ- ಇಂಗ್ಲೆಂಡ್ ಗೋಲುರಹಿತ ಡ್ರಾ

Update: 2022-11-26 01:59 GMT

ಹೊಸದಿಲ್ಲಿ: ಪ್ರಬಲ ಇಂಗ್ಲೆಂಡ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಅಮೆರಿಕ ಶನಿವಾರ ನಡೆದ ಫಿಫಾ ವಿಶ್ವಕಪ್ (FIFA World Cup 2022) ಗುಂಪು ಹಂತದ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿತು.

ಆದರೆ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಕೆಲ ಅವಕಾಶಗಳನ್ನು ಕೈಚೆಲ್ಲಿಕೊಂಡ ಕಾರಣದಿಂದ ಹಾಗೂ ಕಳಪೆ ಫಿನಿಶಿಂಗ್‍ನಿಂದಾಗಿ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸುವ ಅವಕಾಶ ಕಳೆದುಕೊಂಡ ಅಮೆರಿಕ, ಇಂಗ್ಲೆಂಡ್ ಜತೆ ಒಂದು ಅಂಕ ಹಂಚಿಕೊಂಡಿತು.

ಇಂದಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರಿಂದ ಅಗ್ರಸ್ಥಾನಿಯಾದರೂ, ಎರಡು ಪಂದ್ಯಗಳ ಬಳಿಕವೂ ಇಂಗ್ಲೆಂಡ್‍ಗೆ ಪ್ರಿಕಾರ್ಟರ್ ಫೈನಲ್‍ಗೆ ಅರ್ಹತೆ ಸಿಕ್ಕಿಲ್ಲ. ಒಂದು ಗೆಲುವು ಹಾಗೂ ಒಂದು ಡ್ರಾದೊಂದಿಗೆ ಇಂಗ್ಲೆಂಡ್ ನಾಲ್ಕು ಅಂಕಗಳನ್ನು ಕಲೆ ಹಾಕಿದ್ದರೆ, ಅಮೆರಿಕ ಎರಡು ಡ್ರಾದೊಂದಿಗೆ ಎರಡು ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ.

ಇರಾನ್ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಒಂದು ಅಂಕ ಪಡೆದ ವೇಲ್ಸ್ ಕೊನೆಯ ಸ್ಥಾನದಲ್ಲಿದೆ. ಗುಂಪು ಹಂತದ ಕೊನೆಯ ಪಂದ್ಯದ ಫಲಿತಾಂಶಗಳು ಮಂದಿನ ಸುತ್ತಿಗೆ ತೇರ್ಗಡೆಯಾಗುವ ತಂಡಗಳನ್ನು ನಿರ್ಧರಿಸಲಿವೆ.

ಸೋಮವಾರ ಇರಾನ್ ವಿರುದ್ಧ 6-2 ಗೋಲುಗಳ ಭರ್ಜರಿ ವಿಜಯ ದಾಖಲಿಸಿದ್ದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿತ್ತು. ಆದರೆ 1950ರಲ್ಲಿ ಆದ ಅಮೆರಿಕ ವಿರುದ್ಧದ ಸೋಲಿನ ವಿಶ್ವಕಪ್ ವಿಕೋಪ ಗರೆತ್ ಸೌತ್‍ಗೇಟ್ ತಂಡಕ್ಕೆ ಮರುಕಳಿಸಲಿಲ್ಲ ಎನ್ನುವುದೇ ಇಂಗ್ಲೆಂಡ್ ಅಭಿಮಾನಿಗಳಿಗೆ ಸಮಾಧಾನಕರ ಅಂಶ.

ಚೆಲ್ಸಿಯಾ ತಂಡದ ಕ್ರಿಸ್ಟಿಂಯಾನ್ ಪುಲಿಸಿಕ್ ಕ್ರಾಸ್‍ಬಾರ್‍ಗೆ ಹೊಡೆದರೂ, ಮೊದಲಾರ್ಧದಲಿ ಗೋಲು ಗಳಿಸುವ ಅವಕಾಶವನ್ನು ತಪ್ಪಿಸಿಕೊಂಡರು. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಎರಡು ಅರೆ ಅವಕಾಶಗಳನ್ನು ನಿರ್ಬಂಧಿಸಿದರು. ಇಂಗ್ಲೆಂಡ್ ಕೂಡಾ ಮಾಸನ್ ಮೌಂಟ್ ಅವರ ಗೋಲು ಗಳಿಸುವ ಅವಕಾಶವನ್ನು ವ್ಯರ್ಥಪಡಿಸಿಕೊಂಡಿತು. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News