9 ಉಪಗ್ರಹಗಳನ್ನು ಹೊತ್ತ ಇಸ್ರೋದ PSLV-C54 ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ

Update: 2022-11-26 07:17 GMT

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್‌ಎಲ್‌ವಿ-ಸಿ 54 ರಾಕೆಟ್‌ನಲ್ಲಿ ಭೂ ವೀಕ್ಷಣಾ ಉಪಗ್ರಹ - ಓಷನ್‌ಸ್ಯಾಟ್ ಹಾಗೂ  ಇತರ ಎಂಟು ಗ್ರಾಹಕ ಉಪಗ್ರಹಗಳನ್ನು ಸನ್ ಸಿಂಕ್ರೊನಸ್ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ನಡೆಸಿತು.

ಬೆಂಗಳೂರು ಮೂಲದ ಪಿಕ್ಸ್ಸೆಲ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ನಿರ್ಮಿತ ಭೂ ವೀಕ್ಷಣಾ ಉಪಗ್ರಹ 'ಆನಂದ್' ಅನ್ನು ರಾಕೆಟ್ ಹೊತ್ತೊಯ್ದಿದೆ.

Similar News