ಶಿರ್ಡಿಯ ಸಾಯಿಬಾಬಾ ಟೆಂಪಲ್ ಟ್ರಸ್ಟಿಗೆ ರೂ. 175 ಕೋಟಿ ಆದಾಯ ತೆರಿಗೆ ವಿನಾಯಿತಿ

Update: 2022-11-26 07:16 GMT

ಪುಣೆ: ಶಿರ್ಡಿಯ ಶ್ರೀ ಸಾಯಿಬಾಬಾ ಟೆಂಪಲ್ (Shirdi's Saibaba Temple) ಟ್ರಸ್ಟಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ರೂ. 175 ಕೋಟಿ ಆದಾಯ ತೆರಿಗೆ ( income tax) ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಟ್ರಸ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸುಪ್ರೀಂ ಕೋರ್ಟ್ ಆದೇಶಾನುಸಾರ ಈ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

ವಿತ್ತ ವರ್ಷ 2015-16 ಗೆ ಆದಾಯ ತೆರಿಗೆ ಮೌಲ್ಯಮಾಪನ ವೇಳೆ  ಶ್ರೀ ಸಾಯಿಬಾಬಾ ಸಂಸ್ಥಾನ್ ಒಂದು ಧಾರ್ಮಿಕ ಟ್ರಸ್ಟ್ ಅಲ್ಲ ಬದಲು ಚಾರಿಟೇಬಲ್ ಟ್ರಸ್ಟ್ ಎಂದು ತಿಳಿದು ಆದಾಯ ತೆರಿಗೆ ಇಲಾಖೆಯು ದೇವಳದ ಕಾಣಿಕೆ ಡಬ್ಬಗಳಲ್ಲಿ ದೊರೆತ ದೇಣಿಗೆಗಳ ಮೇಲೆ ಶೇ 30 ರಷ್ಟು ಆದಾಯ ತೆರಿಗೆ ವಿಧಿಸಿ ರೂ. 184 ಕೋಟಿ ತೆರಿಗೆ ಪಾವತಿ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಸುಪ್ರಿಂ ಕೋರ್ಟ್ ಕದ ತಟ್ಟಿತ್ತು, ತೆರಿಗೆ ನಿರ್ಣಯವಾಗುವವರಗೆ ತೆರಿಗೆ ಪಾವತಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿತ್ತು, ಎಂದು ಹೇಳಿಕೆ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ನಂತರ ಶ್ರೀ ಸಾಯಿಬಾಬಾ ಸಂಸ್ಥಾನ್ ಅನ್ನು ಧಾರ್ಮಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಎಂದು ಪರಿಗಣಿಸಿ ಕಾಣಿಕೆ ಡಬ್ಬಿಗಳಲ್ಲಿ ಸಂಗ್ರಹವಾಗುವ ಕಾಣಿಕೆ ಮೇಲಿನ ಆದಾಯ ತೆರಿಗೆ ವಿನಾಯಿತಿ ನೀಡಿತ್ತು, ಎಂದು ಟ್ರಸ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕಡೂರು | ವಿದ್ಯಾರ್ಥಿನಿಯರಿಗೆ ಕಿರುಕುಳ: ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

Similar News