ಗುಜರಾತ್‍ನಲ್ಲಿ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಶೇ. 94ರಷ್ಟು ದೇಣಿಗೆ ಪಡೆದಿದೆ: ADR ವರದಿ

Update: 2022-11-28 02:20 GMT

ಅಹ್ಮದಾಬಾದ್: ಕಳೆದ ಐದು ವರ್ಷಗಳಲ್ಲಿ ಗುಜರಾತ್‍ನಲ್ಲಿ ಚುನಾವಣಾ ಬಾಂಡ್ ಮೂಲಕ ಸಂಗ್ರಹವಾದ ಒಟ್ಟು ಮೊತ್ತದಲ್ಲಿ ಆಡಳಿತಾರೂಢ ಬಿಜೆಪಿ ಶೇ. 94ರಷ್ಟು ದೇಣಿಗೆ ಪಡೆದಿದೆ ಎಂದು Association for Democratic Reforms (ADR) ವರದಿ ಮಾಡಿದೆ.

ಎಡಿಆರ್ ವರದಿಯ ಪ್ರಕಾರ 2018ರ ಮಾರ್ಚ್‍ನಿಂದ 2022ರ ಅಕ್ಟೋಬರ್‌ ವರೆಗೆ ರಾಜ್ಯದಲ್ಲಿ ಎಲ್ಲ ಪಕ್ಷಗಳಿಗೆ ಒಟ್ಟು 174 ಕೋಟಿ ರೂ. ದೇಣಿಗೆ ಬಂದಿದ್ದು, ಈ ಪೈಕಿ ಬಿಜೆಪಿ ಪಾಲು 163 ಕೋಟಿ. ಕಾಂಗ್ರೆಸ್ ಪಕ್ಷ 10.5 ಕೋಟಿ ಹಾಗೂ ಆಮ್ ಆದ್ಮಿ ಪಾರ್ಟಿ 32 ಲಕ್ಷ ರೂ. ದೇಣಿಗೆ ಪಡೆದಿವೆ. ಇತರ ಪಕ್ಷಗಳು 20 ಲಕ್ಷ ರೂ. ದೇಣಿಗೆ ಪಡೆದಿವೆ ಎಂದು timesofindia.com ವರದಿ ಮಾಡಿದೆ.

ಒಟ್ಟು 1571 ದೇಣಿಗೆಗಳ ಪೈಕಿ ಬಿಜೆಪಿ 1519 ದೇಣಿಗೆಗಳನ್ನು ಪಡೆದಿದೆ. ರಾಷ್ಟ್ರಮಟ್ಟದಲ್ಲಿ 2017-18ರಿಂದ ಖರೀದಿಯಾದ ಚುನಾವಣಾ ಬಾಂಡ್‍ಗಳ ಪೈಕಿ ಬಿಜೆಪಿ ಮೂರನೇ ಎರಡಷ್ಟು ಅಂದರೆ ಶೇಕಡ 65ರಷ್ಟು ದೇಣಿಗೆ ಪಡೆದಿದೆ.

ಒಟ್ಟು 343 ಕೋಟಿ ರೂ. ಮೊತ್ತದ 595 ಚುನಾವಣಾ ಬಾಂಡ್‍ಗಳು ಖರೀದಿಯಾದ ಗಾಂಧಿನಗರ ಎಸ್‍ಬಿಐ ಶಾಖೆಯಿಂದ ಆರ್‍ಟಿಐ ಅರ್ಜಿ ಮೂಲಕ ADR ಮಾಹಿತಿ ಪಡೆದಿತ್ತು. 2019ರ ಏಪ್ರಿಲ್‍ನಲಿ 87.5 ಕೋಟಿ ರೂ. ಮೌಲ್ಯದ 137 ಬಾಂಡ್‍ಗಳು ಖರೀದಿಯಾಗಿದ್ದವು. ಖರೀದಿಯಾದ ಬಹುತೇಕ ಬಾಂಡ್‍ಗಳು 1 ಕೋಟಿ ರೂ. ಮೌಲ್ಯದ್ದು ಹಾಗೂ ಕೆಲ ಬಾಂಡ್‍ಗಳು 10 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಎಡಿಆರ್ ವರದಿ ವಿವರಿಸಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News