ಫಿಫಾ ವಿಶ್ವಕಪ್: ಕ್ಯಾಮರೂನ್-ಸರ್ಬಿಯ ಪಂದ್ಯ 3-3 ರಿಂದ ಡ್ರಾ

Update: 2022-11-28 12:09 GMT

ದೋಹಾ, ನ.28: ಫಿಫಾ ವಿಶ್ವಕಪ್‌ನಲ್ಲಿ ಗ್ರೂಪ್ ‘ಜಿ’ ಪಂದ್ಯದಲ್ಲಿ ಕ್ಯಾಮರೂನ್ ಹಾಗೂ ಸರ್ಬಿಯ ತಂಡಗಳು 3-3 ಗೋಲುಗಳ ಅಂತರದಿಂದ ಡ್ರಾ ಸಾಧಿಸಿವೆ.

ಅಲ್ ಜನಾಬ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ಯಾಮರೂನ್ ತಂಡ 29ನೇ, 63ನೇ ಹಾಗೂ 66ನೇ ನಿಮಿಷದಲ್ಲಿ ಗೋಲು ಗಳಿಸಿತು. ಮತ್ತೊಂದೆಡೆ ಪ್ರಬಲ ಪ್ರತಿರೋಧ ಒಡ್ಡಿದ ಸರ್ಬಿಯ 45+1, 45+3 ಹಾಗೂ 53ನೇ ನಿಮಿಷದಲ್ಲಿ ಗೋಲು ಗಳಿಸಿತು.

ಮೊದಲ ಪಂದ್ಯದಲ್ಲಿ ಸೋಲುಂಡು, ಎರಡನೇ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಕ್ಯಾಮರೂನ್ ಹಾಗೂ ಸರ್ಬಿಯ 'ಜಿ' ಗುಂಪಿನ ಅಂಕಪಟ್ಟಿಯಲ್ಲಿ ತಲಾ 1 ಅಂಕ ಗಳಿಸಿ ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನದಲ್ಲಿದೆ.

Similar News