ಈಜಿಪ್ಟ್: ಚಿನ್ನದ ನಾಲಿಗೆಯುಳ್ಳ ಮಮ್ಮಿಗಳು ಪತ್ತೆ

Update: 2022-11-28 18:06 GMT

ಕೈರೊ, ನ.28: ಈಜಿಪ್ಟ್(Egypt) ನ ಖ್ವೆಸ್ನಾ(Khvesna) ಪ್ರದೇಶದ ಸ್ಮಶಾನದಲ್ಲಿ ಪುರಾತತ್ವ ಶಾಸ್ತ್ರಜ್ಞರ ತಂಡ ನಡೆಸಿದ ಉತ್ಖನನದ ಸಂದರ್ಭ ಚಿನ್ನದ ನಾಲಿಗೆಯುಳ್ಳ ಮಮ್ಮಿ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರದೇಶದಲ್ಲಿ ವಿವಿಧ ಪ್ರಾಚೀನ ಅವಧಿಗೆ ಸೇರಿದ ಸಮಾಧಿಗಳಿದ್ದು ಇಲ್ಲಿ ಉತ್ಖನನ ನಡೆಸುವಂತೆ ಈಜಿಪ್ಟ್ನ ಪುರಾತತ್ವ ಇಲಾಖೆಯ ಸುಪ್ರೀಂ ಸಮಿತಿ ಆದೇಶಿಸಿತ್ತು. ಇಲ್ಲಿ ಪತ್ತೆಹಚ್ಚಲಾದ ಇನ್ನೂ ಕೆಲವು ಅಸ್ಥಿಪಂಜರಗಳ ಎಲುಬುಗಳಿಗೆ ಚಿನ್ನದ ಪಟ್ಟಿಯಿದ್ದರೆ, ಕೆಲವು ಅಸ್ಥಿಪಂಜರಗಳ ಬಳಿ ಬಂಗಾರದದ ಬಣ್ಣದ ಜೀರುಂಡೆ ಮತ್ತು ಕಮಲ ಪುಷ್ಪದ ಆಕೃತಿಗಳಿದ್ದವು.


 ಕೆಲವು ಮಮ್ಮಿಗಳ ಸ್ಥಿತಿ ಉತ್ತಮವಾಗಿರದಿದ್ದರೂ ಚಿನ್ನದ ಲೈನಿಂಗ್ ಇರುವ ಮಮ್ಮಿಗಳು ಇನ್ನೂ ಹಾಗೆಯೇ ಇವೆ. ಮರದ ಶವಪೆಟ್ಟಿಗೆ ಹಾಗೂ ಅದಕ್ಕೆ ಬಳಸಿರುವ ತಾಮ್ರದ ಮೊಳೆಗಳೂ ಸಹ ಈ ಸ್ಥಳದಲ್ಲಿ ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.

Similar News