ಒಡಿಶಾ ಬೀಚ್ ನಲ್ಲಿ ಯುವತಿಯ ಶವ ಪತ್ತೆ: ಅತ್ಯಾಚಾರ, ಕೊಲೆ ಆರೋಪ ಮಾಡಿದ ಕುಟುಂಬಸ್ಥರು

Update: 2022-11-29 06:25 GMT

ಪುರಿ: ಒಡಿಶಾದ ಪುರಿಯ ಪೆಂತಕಟಾ ಪ್ರದೇಶದ ಬಳಿಯ ಕಡಲತೀರದಲ್ಲಿ 18 ವರ್ಷದ ಯುವತಿಯೊಬ್ಬಳು ನಾಪತ್ತೆಯಾದ ಮೂರು ದಿನಗಳ ನಂತರ ನವೆಂಬರ್ 26 ರಂದು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಯೊಂದರ ಯುವತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಯುವತಿಯನ್ನು ಹೋಟೆಲ್‌ನಿಂದ ಕಿಡ್ನಾಪ್ ಮಾಡಿ ನಂತರ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಯುವತಿಯ ಕುಟುಂಬ ಆರೋಪಿಸಿದೆ.

ಕುಟುಂಬ ಸದಸ್ಯರು ಪುರಿ ಪೊಲೀಸ್ ವರಿಷ್ಠಾಧಿಕಾರಿ ಕೆ. ವಿ. ಸಿಂಗ್ ಅವರನ್ನು ಭೇಟಿ ಮಾಡಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.

ಯುವತಿಯ ಮುಖವು ಸಂಪೂರ್ಣವಾಗಿ ಕಪ್ಪಾಗಿದೆ, ಬಹುಶಃ ಆಮ್ಲದಂತಹ ರಾಸಾಯನಿಕಗಳಿಂದ ಆಕೆಯ ಬೆರಳುಗಳನ್ನು ವಿರೂಪಗೊಳಿಸಲಾಗಿದೆ ಎಂದು ಪುರಿ ಪೊಲೀಸರು ತಿಳಿಸಿದ್ದಾರೆ.

ಆದರೆ, ಮಗಳ ಗುರುತನ್ನು ಮರೆಮಾಚಲು ಕೊಲೆಗಾರ ಆಕೆಯ ಮುಖದ ಮೇಲೆ ಆ್ಯಸಿಡ್ ಸುರಿದಿದ್ದಾನೆ ಎಂದು ತಂದೆ ಹೇಳಿದ್ದಾರೆ. ಆಕೆಯ ಬೆನ್ನ ಮೇಲೂ ಆ್ಯಸಿಡ್ ಸುರಿದಿದ್ದಾರೆ ಎನ್ನಲಾಗಿದೆ.

Similar News