ಭಾರತದಾದ್ಯಂತ ಜಿಯೋ ಸೇವೆಯಲ್ಲಿ ವ್ಯತ್ಯಯ, ಬಳಕೆದಾರರಿಂದ ದೂರು

Update: 2022-11-29 07:31 GMT

ಹೊಸದಿಲ್ಲಿ: ಟೆಲಿಕಾಂ ಆಪರೇಟರ್ ಜಿಯೋ Jio ಕಂಪೆನಿಯ ಭಾರತದಾದ್ಯಂತ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ. ಬೆಳಿಗ್ಗೆಯಿಂದ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸಮಸ್ಯೆ ಹೇಳಿಕೊಂಡಿದ್ದಾರೆ.  ಕೆಲವು ಬಳಕೆದಾರರಿಗೆ ಬೆಳಿಗ್ಗೆ ಎದ್ದ ನಂತರ ಮೆಸೇಜ್ ಗಳನ್ನು  ಕಳುಹಿಸಲು ಸಾಧ್ಯವಾಗಲಿಲ್ಲ. ಸ್ಥಗಿತದ ಹೊರತಾಗಿಯೂ ಎಲ್ಲಾ ಬಳಕೆದಾರರರ ಮೊಬೈಲ್ ಡೇಟಾ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಕೇವಲ ಕರೆ ಹಾಗೂ  SMS ಸೇವೆಗಳ ಮೇಲೆ ಮಾತ್ರ ಪರಿಣಾಮ ಬೀರಿದೆ.

 “ಬೆಳಿಗ್ಗೆಯಿಂದ  ಯಾವುದೇ ವೋಲ್ಟ್ ಚಿಹ್ನೆ ಹಾಗೂ  ಯಾವುದೇ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಕರೆಗಳು ಸಮಸ್ಯೆಗಳನ್ನು ಹೊಂದಿರುವಾಗ ನೀವು 5g ಸೇವೆಗಳನ್ನು ಒದಗಿಸಲು ಹೇಗೆ ಯೋಜಿಸುತ್ತಿರಿ? ಕೆಲವು ಬಳಕೆದಾರರಿಗೆ ಇಂಟರ್ನೆಟ್ ಸೇವೆಗಳು ಕಾರ್ಯನಿರ್ವಹಿಸುತ್ತಿರುವಾಗ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಜಿಯೋ ಕಂಪೆನಿ ಇನ್ನೂ ಸ್ಥಗಿತದ ಸಮಸ್ಯೆಯನ್ನು ಪರಿಹರಿಸಿಲ್ಲ.

ಸ್ಥಗಿತಗಳನ್ನು ಪತ್ತೆಹಚ್ಚುವ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, ಜಿಯೋ ಭಾರತದಲ್ಲಿನ ಅನೇಕ ಬಳಕೆದಾರರಿಗೆ ಬೆಳಿಗ್ಗೆ 6 ರಿಂದ 9 ರವರೆಗೆ ಕೆಲಸ ಮಾಡುವುದನ್ನು ನಿಲ್ಲಿಸಿತು. 37 ರಷ್ಟು ಬಳಕೆದಾರರು ಸಿಗ್ನಲ್ ಪಡೆಯುತ್ತಿಲ್ಲ ಎಂದು ದೂರಿದ್ದಾರೆ, 37 ರಷ್ಟು ಬಳಕೆದಾರರಿಗೆ ಕರೆ ಮಾಡಲು ಮತ್ತು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಆದರೆ ಉಳಿದ 26 ಶೇಕಡಾ ಬಳಕೆದಾರರಿಗೆ ಮೊಬೈಲ್ ಇಂಟರ್ನೆಟ್ ಅನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದಿದೆ.

ಜಿಯೋ ಸೇವೆಯ ವ್ಯತ್ಯಯವು ದಿಲ್ಲಿ, ಅಹಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ಇತರ ನಗರಗಳ ಮೇಲೆ ಪರಿಣಾಮ ಬೀರಿದೆ.

Similar News