'ನಿಮಗೇನು ರಾವಣನಂತೆ ನೂರು ತಲೆಗಳಿವೆಯೇ?ʼ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ಆಕ್ರೋಶ

Update: 2022-11-29 09:37 GMT

ಅಹಮದಾಬಾದ್‌:  ಗುಜರಾತ್‌ನಲ್ಲಿ ನಡೆದ  ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  Mallikarjun Kharge ಅವರ ವಿರುದ್ಧ   ಬಿಜೆಪಿ ಸೋಮವಾರ  ಆಕ್ರೋಶ ವ್ಯಕ್ತಪಡಿಸಿದೆ.

  ಪ್ರತಿಯೊಂದು  ಚುನಾವಣೆಗೂ  ಪ್ರಧಾನಿ ಮೋದಿಯವರ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಿಜೆಪಿಯ ವಿರುದ್ದ ಇಲ್ಲಿನ  ಬೆಹ್ರಾಂಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, “ಕಾರ್ಪೊರೇಷನ್ ಚುನಾವಣೆಗಳು, ಎಂಎಲ್‌ಎ ಚುನಾವಣೆಗಳು ಅಥವಾ ಎಂಪಿ ಚುನಾವಣೆಗಳಲ್ಲಿ ನಿಮ್ಮ (ಮೋದಿ) ಮುಖವನ್ನು ನಾವು ಎಲ್ಲೆಡೆ ನೋಡುತ್ತೇವೆ… ರಾವಣನಂತೆ ನಿಮ್ಮ  ಬಳಿ  100 ತಲೆಗಳಿವೆಯೇ?" ಎಂದು ಪ್ರಶ್ನಿಸಿದ್ದರು.

 “ಅದು ಪುರಸಭೆ ಚುನಾವಣೆಯಾಗಿರಲಿ, ಕಾರ್ಪೊರೇಷನ್ ಚುನಾವಣೆಗಳು (ಅಥವಾ ಅಸೆಂಬ್ಲಿ ಚುನಾವಣೆಗಳು) ಯಾಗಿರಲಿ ಮೋದಿಜಿಯವರ ಹೆಸರಿನಲ್ಲಿ ಮತ ಕೇಳುವುದನ್ನು ನಾನು ನೋಡುತ್ತಿದ್ದೇನೆ,... ಅಭ್ಯರ್ಥಿಯ ಹೆಸರಿನಲ್ಲಿ ಮತ ಕೇಳಿ ... ಮುನ್ಸಿಪಾಲಿಟಿಯಲ್ಲಿ ಮೋದಿ ಅವರು ಬಂದು ಕೆಲಸ ಮಾಡುತ್ತಾರೆಯೇ? ನಿಮ್ಮ ಅಗತ್ಯದ ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಎಂದು ಖರ್ಗೆ ಕೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಅಮಿತ್ ಮಾಳವೀಯ, ಕಾಂಗ್ರೆಸ್ ಪಕ್ಷವು ಪ್ರಧಾನಿಯವರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ್ದಾರೆ.

 "ಗುಜರಾತ್ ಚುನಾವಣೆಯ ಬಿಸಿ ತಾಳಲಾರದೆ, ಅಂಚಿಗೆ ತಳ್ಳಲ್ಪಟ್ಟ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು "ರಾವಣ" ಎಂದು ಕರೆಯುತ್ತಾರೆ. "ಮೌತ್ ಕಾ ಸೌದಾಗರ್" ನಿಂದ "ರಾವಣ" ವರೆಗೆ ಕಾಂಗ್ರೆಸ್ ಗುಜರಾತ್ ಹಾಗೂ  ಅದರ ಮಗನನ್ನು ಅವಮಾನಿಸುತ್ತಲೇ ಇದೆ ಎಂದು ಟ್ವೀಟಿಸಿದ್ದಾರೆ.

Similar News