​ಉಕ್ರೇನ್ ಯುದ್ಧದ ಬಗ್ಗೆ ಪೋಪ್ ಟೀಕೆಗೆ ರಶ್ಯ ಪ್ರತಿಭಟನೆ

Update: 2022-11-29 15:22 GMT

ಮಾಸ್ಕೊ, ನ.29: ಉಕ್ರೇನ್‌ನಲ್ಲಿ ರಶ್ಯದ ಕೃತ್ಯಗಳ ‘ಕ್ರೌರ್ಯ’ದ ಬಗ್ಗೆ ಪೋಪ್ ಫ್ರಾನ್ಸಿಸ್ ಅವರ ಇತ್ತೀಚಿನ ಹೇಳಿಕೆಗೆ ರಶ್ಯದ ಅಸಮಾಧಾನವನ್ನು ರಶ್ಯದ ರಾಯಭಾರಿ ವ್ಯಕ್ತಪಡಿಸಿದ್ದಾರೆ ಎಂದು ಆರ್‌ಐಎ ನೊವೋಸ್ತಿ ಸುದ್ಧಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಅಮೆರಿಕದ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪೋಪ್ ಫ್ರಾನ್ಸಿಸ್ ‘ ಉಕ್ರೇನ್‌ನ ಬಗ್ಗೆ ನಾನು ಮಾತನಾಡುವಾಗ ಕ್ರೌರ್ಯದ ಬಗ್ಗೆ ಉಲ್ಲೇಖಿಸಬೇಕಾಗುತ್ತದೆ. ಯಾಕೆಂದರೆ ಆ ದೇಶದ ಮೇಲೆ ಆಕ್ರಮಣ ಎಸಗಿದ ಸೇನೆ ನಡೆಸಿದ ಕ್ರೌರ್ಯದ ಬಗ್ಗೆ ನನಗೆ ಬಹಳಷ್ಟು ಮಾಹಿತಿಯಿದೆ. ಬಹುಮಟ್ಟಿಗೆ, ಕ್ರೂರರು ಬಹುಷಃ ರಶ್ಯದವರು, ಆದರೆ ರಶ್ಯನ್ ಸಂಪ್ರದಾಯದವರಲ್ಲ(ಚೆಚೆನ್ಯರು, ಬುರಿಯಾಟಿ ಮುಂತಾದವರಂತೆ). ಖಂಡಿತವಾಗಿಯೂ ಆಕ್ರಮಣ ಎಸಗಿದ್ದು ರಶ್ಯ ದೇಶ, ಇದಂತೂ ಸ್ಪಷ್ಟವಾಗಿದೆ’ ಎಂದಿದ್ದರು.

Similar News