​ತೆಂಗು ಮತ್ತು ನಾರಿನ ಘಟಕದ ಸೊತ್ತು ಕಳವು

Update: 2022-11-29 15:24 GMT

ಕುಂದಾಪುರ, ನ.29: ವಕ್ವಾಡಿಯಲ್ಲಿರುವ ತೆಂಗು ಮತ್ತು ನಾರಿನ ಘಟಕದಲ್ಲಿರುವ ಸಾವಿರಾರು ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.

ತೆಂಗಿನ ಸಿಪ್ಪೆಯ ಬೆಲೆ ಹೆಚ್ಚಳದಿಂದ ಈ ಘಟಕವು ಕಳೆದ 2 ವರ್ಷಗಳಿಂದ ಬಂದ್ ಆಗಿದ್ದು, ನ.22ರ ರಾತ್ರಿಯಿಂದ ಸೆ.23ರ ಬೆಳಗಿನ ಮಧ್ಯಾವಧಿಯಲ್ಲಿ ಘಟಕದ ಶೆಡ್‌ನಲ್ಲಿ ಅಳವಡಿಸಿದ ಕೊಳವೆ ಬಾವಿಯ ಸ್ಟಾರ್ಟರ್ ಮತ್ತು ಕೇಬಲ್ ವಯರ್, ಹಾಗೂ ಬೀಟರ್ ಯಂತ್ರದ ಕವರ್ ಮತ್ತು ಬಿಡಿ ಭಾಗಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 50,000 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News