ಇನ್ನೂ 15 ಏಜೆನ್ಸಿಗಳೊಂದಿಗೆ ಮಾಹಿತಿ ಹಂಚಿಕೆಗೆ ಈ.ಡಿ.ಗೆ ಕೇಂದ್ರದ ಅನುಮತಿ

Update: 2022-11-29 15:32 GMT

ಹೊಸದಿಲ್ಲಿ,ನ.29: ಕೇಂದ್ರ ಸರಕಾರವು ಗಂಭೀರ ವಂಚನೆಗಳ  ತನಿಖಾ ಕಚೇರಿ (SFIO),ಭಾರತೀಯ ಸ್ಪರ್ಧಾ ಆಯೋಗ (CCI) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಂತಹ ಇನ್ನೂ 15 ಏಜೆನ್ಸಿಗಳ ಜೊತೆ ಆರ್ಥಿಕ ಅಪರಾಧಿಗಳ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳಲು ಜಾರಿ ನಿರ್ದೇಶನಾಲಯ (E.D.)ಕ್ಕೆ ಅನುಮತಿ ನೀಡಿದೆ.

ವಿತ್ತ ಸಚಿವಾಲಯವು ನ.22ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA),2002ಕ್ಕೆ ಬದಲಾವಣೆಗಳನ್ನು ಅಧಿಸೂಚಿಸಿದೆ.

ಮುಖ್ಯವಾಗಿ ಅಕ್ರಮ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆ ಪ್ರಕರಣಗಳನ್ನು ನಿರ್ವಹಿಸುವ ಈ.ಡಿ.ಈ ಅಧಿಸೂಚನೆಯ ಮೂಲಕ ಈ ಮೊದಲು ನಿಗದಿಗೊಳಿಸಿದ್ದ 10 ಸೇರಿದಂತೆ ಒಟ್ಟು 25 ಸಂಸ್ಥೆಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ.

ಎನ್ಐಎ,ಎಸ್ಎಫ್ಐಒ,ರಾಜ್ಯ ಪೊಲೀಸ್ ಇಲಾಖೆ,ವಿವಿಧ ಕಾಯ್ದೆಗಳಡಿ ನಿಯಂತ್ರಕರು,ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (ಡಿಜಿಎಫ್ಟಿ),ವಿದೇಶಾಂಗ ವ್ಯವಹಾರಗಳ ಸಚಿವಾಲಯ,ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್,ಕೇಂದ್ರ ಜಾಗ್ರತ ಆಯೋಗ (CVC),ರಕ್ಷಣಾ ಗುಪ್ತಚರ ಸಂಸ್ಥೆ,ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ,ಮಿಲಿಟರಿ ಇಂಟಲಿಜೆನ್ಸ್,ಕೇಂದ್ರ ನಾಗರಿಕ ಸೇವಗಳ ನಿಯಮಗಳಡಿ ವಿಚಾರಣಾ ಪ್ರಾಧಿಕಾರ,ವನ್ಯಜೀವಿ ಅಪರಾಧ ನಿಯಂತ್ರಣ ಘಟಕ ಮತ್ತು ಸಿಸಿಐ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ 15 ಏಜೆನ್ಸಿಗಳಲ್ಲಿ ಸೇರಿವೆ.

Similar News