×
Ad

ಮತ್ತೊಮ್ಮೆ ಜೀವನಶ್ರೇಷ್ಠ ಸಾಧನೆ ಮಾಡಿದ ಲಕ್ಷ್ಯ ಸೇನ್

ಬಿಡಬ್ಲ್ಯುಎಫ್ ರ‍್ಯಾಂಕಿಂಗ್

Update: 2022-11-29 23:49 IST

ಹೊಸದಿಲ್ಲಿ, ನ.29: ಭಾರತದ ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ವರ್ಲ್ಡ್ ರ‍್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ಮತ್ತೊಮ್ಮೆ ಜೀವನಶ್ರೇಷ್ಠ ಆರನೇ ಸ್ಥಾನ ತಲುಪಿದ್ದಾರೆ.


ಅಲ್ಮೋರಾದ 21ರ ಹರೆಯದ ಲಕ್ಷ್ಯ ಸೇನ್ ಈ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದು, 23 ಟೂರ್ನಿಗಳಿಂದ 75,024 ಪಾಯಿಂಟ್ಸ್  ಕಲೆ ಹಾಕಿದ್ದಾರೆ.
ಕಿಡಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಕ್ರಮವಾಗಿ ವಿಶ್ವದ ನಂ.11 ಹಾಗೂ 12ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮಹಿಳಾ ಡಬಲ್ಸ್ ಜೋಡಿ ತ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ಎರಡು ಸ್ಥಾನ ಮೇಲಕ್ಕೇರಿ ವಿಶ್ವದ ನಂ.19ನೇ ಸ್ಥಾನ ತಲುಪುವ ಮೂಲಕ ಅಗ್ರ-20ರೊಳಗೆ ಸ್ಥಾನ ಪಡೆದರು.


ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ವಿಜೇತ ಜೋಡಿ 17 ಟೂರ್ನಿಗಳಲ್ಲಿ  46,020 ಅಂಕವನ್ನು ಗಳಿಸಿದೆ.
ಫ್ರೆಂಚ್ ಓಪನ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಗಳಾದ  ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ  ಪುರುಷರ ಡಬಲ್ಸ್ ನಲ್ಲಿ ಏಳನೇ ಸ್ಥಾನ ಉಳಿಸಿಕೊಂಡಿದ್ದಾರೆ.


ಈ ವರ್ಷದ ಕಾಮನ್ವೆಲ್ತ್ ಗೇಮ್ಸ್ ನಂತರ ಗಾಯದ ಸಮಸ್ಯೆಯಿಂದಾಗಿ ಯಾವುದೇ ಟೂರ್ನಿಯಲ್ಲಿ ಆಡದ ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ಕೂಡ ವಿಶ್ವದ ನಂ.6ನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

Similar News