ಡೋಪ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಬೌದ್ಧ ಬಿಕ್ಕುಗಳು ವಜಾ

Update: 2022-11-29 18:32 GMT

ಬ್ಯಾಂಕಾಕ್, ನ.29: ಬ್ಯಾಂಕಾಕ್‌(Bangkok)ನ ಬೌದ್ಧ ದೇವಾಲಯದ 4 ಬೌದ್ಧ ಬಿಕ್ಕುಗಳು ಮಾದಕ ವಸ್ತುಗಳ ಸೇವನೆಯನ್ನು ಪತ್ತೆಹಚ್ಚುವ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಫೆಚಬನ್ ಪ್ರಾಂತದ ಬಂಗ್ ಸಂಫಾನ್ (Bang Samphan)ಜಿಲ್ಲೆಯ ಬೌದ್ಧ ದೇವಾಲಯದ ಮಠಾಧಿಕಾರಿ ಸಹಿತ 4 ಭಿಕ್ಕುಗಳೂ ದೃವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು ಮೆಥಂಫೆಟಮೈನ್ ಸೇವಿಸಿರುವುದು ದೃಢಪಟ್ಟಿದೆ. ಅವರನ್ನು ಮಾದಕವಸ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಇದೀಗ ದೇವಾಲಯದಲ್ಲಿ ಬೌದ್ಧಭಿಕ್ಕುಗಳಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Similar News