×
Ad

ಭಾರತೀಯ ಬುಡಕಟ್ಟು ಪಕ್ಷದ ಕಾರ್ಯಕರ್ತನ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

Update: 2022-11-30 22:17 IST

ಭರೂಚ್: ಭಾರತೀಯ ಬುಡಕಟ್ಟು ಪಕ್ಷದ ಕಾರ್ಯಕರ್ತನ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಗುಜರಾತ್‌ನ ಭರೂಚ್ ಜಿಲ್ಲೆಯ ಬಿಜೆಪಿಯ ನಾಯಕನೊಬ್ಬ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೃತ ಬುಡಕಟ್ಟು  ಪಕ್ಷದ ಕಾರ್ಯಕರ್ತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬಿಜೆಪಿ ನಾಯಕ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಟಿಪಿ ಶಾಸಕ ಛೋಟುಭಾಯಿ ವಾಸವ ಅವರು ಜಾಗಡಿಯಾ ತಾಲೂಕು ಪಂಚಾಯತ್‌ನ ಬಿಜೆಪಿ ಉಪಾಧ್ಯಕ್ಷರಾಗಿರುವ ಪ್ರಕಾಶ್ ದೇಸಾಯಿ ಮತ್ತು ಇತರರನ್ನು ಡಿಸೆಂಬರ್ 1 ರೊಳಗೆ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದ ನಂತರ ಉಮಲ್ಲಾ ಪೊಲೀಸರು ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ. ಅಸೆಂಬ್ಲಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜಗಾಡಿಯಾ ಶಾಸಕ ಛೋಟುಬಾಯಿ ಚುನಾವಣಾಧಿಕಾರಿಗಳಿಗೆ ಬುಧವಾರ ಬರೆದಿದ್ದು, ಬಿಜೆಪಿ ನಾಯಕ "ಈ ಪ್ರದೇಶದ ಜನರನ್ನು ಭಯಭೀತಗೊಳಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ" ಎಂದು ಆರೋಪಿಸಿದ್ದಾರೆ.

ಸೋಮವಾರ ರಾತ್ರಿ ರಾಯಸಿಂಗ್‌ಪುರ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಟಿಪಿ ಕಾರ್ಯಕರ್ತ ಆಕಾಶ್ ವಾಸವ (23) ಅವರಿಗೆ ದೇಸಾಯಿ ಮತ್ತು ಇತರರು ಬೆದರಿಕೆ ಹಾಕಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ದೇಸಾಯಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಜಗಡಿಯಾ ಸಿವಿಲ್ ಆಸ್ಪತ್ರೆಯಿಂದ ಮೃತದೇಹವನ್ನು ಕೊಂಡೊಯ್ಯಲು ಜುಟುಂಬಸ್ಥರು ನಿರಾಕರಿಸಿದರು ಎಂದು ವರದಿಯಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಮಲ್ಲಾ ಠಾಣೆಗೆ ಆಗಮಿಸಿ ಮೃತ ಯುವಕನ ಅಜ್ಜ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಒತ್ತಡ ಹೇರಿದ ಬಳಿಕ ದೇಸಾಯಿ, ನಾಗಿನ್ ವಾಸವ, ಛಾನಾ ವಾಸವ, ಗಣೇಶ್ ವಾಸವ, ವಾಸುದೇವ್ ವಾಸವ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ.

Similar News