ಕಾಂಗ್ರೆಸ್‌ ನಲ್ಲಿ ನಾನು 22 ವರ್ಷ ವ್ಯರ್ಥ ಮಾಡಿದ್ದೇನೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

Update: 2022-12-01 15:42 GMT

ಗುವಾಹಟಿ: ತಾನು ಕಾಂಗ್ರೆಸ್ (Congress) ತೊರೆದು ಬಿಜೆಪಿಗೆ(BJP) ಬಂದಾಗ ಯಾವುದೇ ಸೈದ್ಧಾಂತಿಕ ಬದಲಾವಣೆ ನಡೆದಿಲ್ಲ ಮತ್ತು ಕಾಂಗ್ರೆಸ್‌ನಲ್ಲಿ ನಾನು ನನ್ನ 22 ವರ್ಷಗಳನ್ನು ವ್ಯರ್ಥ ಮಾಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಹೇಳಿದ್ದಾರೆ.

"ಕಾಂಗ್ರೆಸ್‌ನಲ್ಲಿ ನಾವು ಕುಟುಂಬವನ್ನು ಪೂಜಿಸುತ್ತಿದ್ದೆವು, ಬಿಜೆಪಿಯಲ್ಲಿ ನಾವು ದೇಶವನ್ನು ಪೂಜಿಸುತ್ತೇವೆ" ಎಂದು ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.   ಅಸ್ಸಾಂನಲ್ಲಿ ಕಾಂಗ್ರೆಸ್ ಸಚಿವರಾಗಿದ್ದ ಶರ್ಮಾ ಅವರು 2015 ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿಕೊಂಡಿದ್ದರು. 

ದಿಲ್ಲಿಯ ಶ್ರದ್ಧಾ ವಾಲ್ಕರ್ ಅವರ ಹತ್ಯೆಯನ್ನು ಲವ್‌ ಜಿಹಾದ್‌ ಭಾಗವೆಂದು ಪ್ರತಿಪಾದಿಸಿದ ಶರ್ಮಾ, ಲವ್ ಜಿಹಾದ್ ಸೇರಿದಂತೆ ಇತರ ಅಪರಾಧಗಳ ಕುರಿತಾದ ಹಲವಾರು ಹಿಂದುತ್ವ ಸಿದ್ಧಾಂತಗಳನ್ನು ಸಮರ್ಥಿಸಿಕೊಂಡರು.

ಎಲ್ಲಾ ಸಮುದಾಯಗಳಲ್ಲಿ ಇದೇ ರೀತಿಯ ಅಪರಾಧಗಳು ವರದಿಯಾಗುತ್ತಿರುವುದರಿಂದ ಇದನ್ನು ಯಾವ ಆಧಾರದ ಮೇಲೆ ಲವ್‌ ಜಿಹಾದ್‌ ಎಂಬ ತೀರ್ಮಾನಕ್ಕೆ ಬರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಾ,"ಲವ್ ಜಿಹಾದ್" ಎಂದರೇನು ಎಂಬುದನ್ನು ಕಾನೂನುಬದ್ಧವಾಗಿ ವ್ಯಾಖ್ಯಾನಿಸುವ ಸಮಯ ಬಂದಿದೆ.  ಅದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ." ಎಂದು ಹೇಳಿದ್ದಾರೆ. 

2002ರ ಗುಜರಾತ್ ಗಲಭೆಯಲ್ಲಿನ ನ್ಯಾಯಾಲಯದ ತೀರ್ಪು ಸೇರಿದಂತೆ ಇತರ ವಿಷಯದ ಕುರಿತು ಪ್ರಶ್ನಿಸಿದಾಗ, "ಸಾಮಾನ್ಯವಾಗಿ ಹಿಂದೂಗಳು ಗಲಭೆಗಳನ್ನು ಮಾಡುವುದಿಲ್ಲ. ಹಿಂದೂಗಳು ಶಾಂತಿ-ಪ್ರೀತಿಯ ಸಮುದಾಯವಾಗಿದೆ." ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಏಪರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಎಚ್.ಡಿ. ದೇವೇಗೌಡ 

Similar News