ಉಡುಪಿ: ಡಿ.3ರಂದು ವಿದ್ಯುತ್ ವ್ಯತ್ಯಯ
Update: 2022-12-01 22:02 IST
ಉಡುಪಿ, ಡಿ.1: ಕೊಲ್ಲೂರು 33 ಕೆವಿ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಮತ್ತು 110/33/11 ಕೆವಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಂಬದಕೋಣೆ ಹಾಗೂ ಮರವಂತೆ ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿ ನಡೆಯಲಿರುವುದರಿಂದ ಮರವಂತೆ, ನಾವುಂದ, ಯಡೇರಿ, ಕಂಬದಕೋಣೆ, ಹೆರಂಜಾಲು, ಕಾಲ್ತೋಡು, ಕಿರಿಮಂಜೇಶ್ವರ, ಬವಳಾಡಿ ಮತ್ತು ಕೆರ್ಗಾಲ್ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.3 ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.