×
Ad

ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ವಸೂಲಿಗೆ ವಿರೋಧ: ಸಮಾನ ಮನಸ್ಕರಿಂದ ಧರಣಿ

Update: 2022-12-02 12:31 IST

ಪಡುಬಿದ್ರೆ, ಡಿ.2: ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಿರುವುದರ ಮಧ್ಯೆಯೇ ಇಲ್ಲಿನ ಟೋಲ್ ಅನ್ನು ಸೇರಿಸಿ ಹೆಜಮಾಡಿ ಟೋಲ್ ಗೇಟ್ ನಲ್ಲಿ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಘೋಷಣೆಯನ್ನು ವಿರೋಧಿಸಿ ಇಂದು ಹೆಜಮಾಡಿಯಲ್ಲಿ ಧರಣಿ ನಡೆಯಿತು.

ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿಂದು ಬೆಳಗ್ಗೆ ಹೆಜಮಾಡಿ ಟೋಲ್ ಗೇಟ್ ಬಳಿ ಧರಣಿ ನಡೆಸಲಾಯಿತು.

ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಟೋಲ್ ವಿಲೀನ ಆದೇಶ ರದ್ದುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶೇಖರ್ ಹೆಜಮಾಡಿ ಮೊದಲಾದವರು ಧರಣಿಗೆ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಸಮಾರೋಪ

Similar News