ಜೆಎನ್ ಯುನಲ್ಲಿ ಬ್ರಾಹ್ಮಣರ ವಿರುದ್ಧ ಗೋಡೆ ಬರಹ, ತನಿಖೆಗೆ ಆದೇಶ

Update: 2022-12-02 08:13 GMT

ಹೊಸದಿಲ್ಲಿ: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್ ನ ಹಲವಾರು ಗೋಡೆಗಳು ಹಾಗೂ  ಅಧ್ಯಾಪಕರ ಕೊಠಡಿಗಳಲ್ಲಿ ಗುರುವಾರ  ಬ್ರಾಹ್ಮಣ ಸಮುದಾಯದ ವಿರುದ್ಧ ಬರಹಗಳು ಕಂಡುಬಂದಿದ್ದು, ಈ ಬರಹಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಖಂಡಿಸಿರುವ ಜೆಎನ್‌ಯು ಉಪಕುಲಪತಿಗಳು ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ,  ಗೋಡೆಗಳು ಹಾಗೂ  ಅಧ್ಯಾಪಕರ ಕೊಠಡಿಗಳಲ್ಲಿ "ಬ್ರಾಹ್ಮಣ-ವಿರೋಧಿ" ಘೋಷಣೆಗಳನ್ನು ಬರೆದಿರುವುದನ್ನುತೋರಿಸುತ್ತಿದೆ.  "ಶಾಖಾಗೆ ಮರಳಿಹೋಗಿ", "ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ"  ಎಂಬ ಘೋಷಣೆಗಳನ್ನುಬರೆಯಲಾಗಿದೆ.

ಆರೆಸ್ಸೆಸ್ -ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬ್ರಾಹ್ಮಣರ ವಿರುದ್ಧದ ಗೋಡೆಬರಹವನ್ನು ತೀವ್ರವಾಗಿ ಖಂಡಿಸಿದೆ.

Similar News