×
Ad

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ ಸಾಧ್ಯತೆ

Update: 2022-12-02 13:29 IST

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ Congress president Mallikarjun Kharge  ಅವರನ್ನು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನದಿಂದ  ಬದಲಾಯಿಸುವ ಬಗ್ಗೆ ಪಕ್ಷವು ಇನ್ನೂ ನಿರ್ಧರಿಸದ ಕಾರಣ, ಖರ್ಗೆ ಅವರು  ಮೇಲ್ಮನೆಯಲ್ಲಿ  ಪ್ರತಿಪಕ್ಷ ನಾಯಕರಾಗಿ ಮುಂದುವರಿಯಬಹುದು ಎಂದು ವರದಿಯಾಗಿದೆ.

ಖರ್ಗೆಯವರು ಎರಡು ಹುದ್ದೆಗಳನ್ನು ಅಲಂಕರಿಸಿದರೆ  ರಾಹುಲ್ ಗಾಂಧಿ ಒತ್ತಿ ಹೇಳುತ್ತಿರುವ "ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ" ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ.

ಸೋನಿಯಾ ಗಾಂಧಿ ಅವರು ನಾಳೆ ಕಾಂಗ್ರೆಸ್ ಸಂಸದೀಯ ಪಕ್ಷದ "ತಂತ್ರಗಾರಿಕೆಯ ಗುಂಪಿನ" ಸಭೆಯನ್ನು ಕರೆದಿದ್ದಾರೆ. ರಾಜ್ಯಸಭೆಯಿಂದ ಖರ್ಗೆ, ಜೈರಾಮ್ ರಮೇಶ್ ಹಾಗೂ  ಕೆಸಿ ವೇಣುಗೋಪಾಲ್ ಅವರನ್ನು ಮಾತ್ರ ಸಭೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಖರ್ಗೆ ಅವರಿಂದ ತೆರವಾಗಲಿರುವ ಪ್ರತಿಪಕ್ಷ ನಾಯಕನ ಸ್ಥಾನ ತುಂಬಲು ಮುಂಚೂಣಿಯಲ್ಲಿರುವ ದಿಗ್ವಿಜಯ ಸಿಂಗ್ ಹಾಗೂ ಪಿ. ಚಿದಂಬರಂ ಅವರನ್ನು ಸಭೆಗೆ ಆಹ್ವಾನಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಖರ್ಗೆ ಅವರು ಕಾಂಗ್ರೆಸ್ ಮುಖ್ಯಸ್ಥ ಸ್ಥಾನದ ಚುನಾವಣೆಗೆ  ನಾಮಪತ್ರ ಸಲ್ಲಿಸುವ ಮೊದಲು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮೂಲಗಳ ಪ್ರಕಾರ ಅವರು ಕನಿಷ್ಠ ಸಂಸತ್ತಿನ ಚಳಿಗಾಲದ ಅಧಿವೇಶನದ ತನಕ ಪ್ರತಿಪಕ್ಷ ನಾಯಕರಾಗಿ  ಮುಂದುವರಿಯಬಹುದು.

Similar News