ಮತ್ತೆ ಕಾನ್ಯೆ ವೆಸ್ಟ್ ಟ್ವಿಟರ್ ಖಾತೆ ಅಮಾನತು: ಕಾರಣವೇನು ಗೊತ್ತೇ?

Update: 2022-12-02 12:50 GMT

ವಾಷಿಂಗ್ಟನ್: ಕಳೆದ ಎರಡು ತಿಂಗಳ ಹಿಂದಷ್ಟೆ ಸಕ್ರಿಯಗೊಂಡಿದ್ದ ರ‍್ಯಾಪ್ ಸ್ಟಾರ್ ಕಾನ್ಯೆ ವೆಸ್ಟ್ (Kanye West) ಅವರ ಟ್ವೀಟ್‍ ಗಳು ಸಾಮಾಜಿಕ ಮಾಧ್ಯಮ ವೇದಿಕೆ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಿ ಟ್ವಿಟರ್ (Twitter) ಅವರ ಖಾತೆಯನ್ನು ಪುನಃ ಅಮಾನತುಗೊಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk), ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಹೀಗಿದ್ದೂ ಅವರು ಹಿಂಸೆಗೆ ಪ್ರಚೋದನೆ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತನ್ನನ್ನು ಸಂಪೂರ್ಣ ವಾಕ್ ಸ್ವಾತಂತ್ರ್ಯದ ಪರ ಎಂದು ಕರೆದುಕೊಂಡಿರುವ ಟ್ವಿಟರ್ ಮಾಲಕ ಎಲಾನ್ ಮಸ್ಕ್, ಸದ್ಯ ಅಕ್ಟೋಬರ್ ನಿಂದ ಟ್ವಿಟರ್ ನಲ್ಲಿ ‘ಯೆ’ ಎಂದು ಗುರುತಿಸಿಕೊಂಡಿರುವ ರ‍್ಯಾಪ್ ಸ್ಟಾರ್ ಕಾನ್ಯೆ ವೆಸ್ಟ್ ಅವರನ್ನು ಟ್ವಿಟರ್ ವೇದಿಕೆಗೆ ಸ್ವಾಗತಿಸಿದ್ದರು.

ಇದಲ್ಲದೆ ಟ್ವಿಟರ್ 'ಯೆ' ಅವರ ಟ್ವೀಟ್ ಒಂದನ್ನು ನಿರ್ಬಂಧಿಸಿತು. ಟ್ವಿಟರ್ ಬಳಕೆದಾರರೊಬ್ಬರು, “ಎಲಾನ್ ಯೆಯ‍ನ್ನು ದಯವಿಟ್ಟು ಕಟ್ಟಿಹಾಕಿ” ಎಂಬ ಟ್ವೀಟ್‍ ಗೆ ಮಸ್ಕ್ ಪ್ರತಿಕ್ರಿಯಿಸಿದ ಒಂದು ಗಂಟೆಯೊಳಗೆ ಅವರ ಖಾತೆಯನ್ನು ಅಮಾನತುಗೊಳಿಸಲಾಯಿತು.

ರ‍್ಯಾಪ್ ಸ್ಟಾರ್ ಯೆ ಅವರ ಟ್ವಿಟರ್ ಖಾತೆಯನ್ನು ಮಸ್ಕ್ 44 ಬಿಲಿಯನ್ ಡಾಲರ್ ಗೆ ಟ್ವಿಟರ್ ವೇದಿಕೆಯನ್ನು ಖರೀದಿ ಮಾಡುವ ಮುನ್ನವೇ ಸಕ್ರಿಯಗೊಳಿಸಲಾಗಿತ್ತು. ಇದಾದ ನಂತರ ಯೆ ಅನ್ನು ಟ್ವಿಟರ್ ಗೆ ಮರಳಿ ತರುವಲ್ಲಿ ತನ್ನದೇನೂ ಪಾತ್ರವಿರಲಿಲ್ಲವೆಂದು ಎಲಾನ್ ಮಸ್ಕ್ ಸ್ಪಷ್ಟನೆ ನೀಡಿದ್ದರು.

Similar News