ಅಲ್ಖೈದಾ ನಾಯಕರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ

Update: 2022-12-02 16:28 GMT

ವಾಷಿಂಗ್ಟನ್, ಡಿ.2: ಅಲ್ಖೈದಾ (Al Qaeda)ಮತ್ತು ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸಂಘಟನೆಯ 4 ನಾಯಕರನ್ನು ಜಾಗತಿಕ ಉಗ್ರರೆಂದು ಗುರುತಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್(Anthony Blinken) ಹೇಳಿದ್ದಾರೆ.

ಅಲ್ಖೈದಾದ ನಾಯಕರಾದ  ಒಸಾಮ ಮಹ್ಮೂದ್, ಆತಿಫ್ ಯಾಹ್ಯಾ, ಮುಹಮ್ಮದ್ ಮರೂಫ್, ಟಿಟಿಪಿಯ ಖಾರಿ ಅಮ್ಜದ್ರ  ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲಾಗಿದ್ದು ಅಮೆರಿಕದ ನ್ಯಾಯವ್ಯಾಪ್ತಿಗೆ ಸೇರಿದ ಇವರಿಗೆ ಸಂಬಂಧಿಸಿದ ಆಸ್ತಿ ಮತ್ತು ಆಸಕ್ತಿಯನ್ನು ನಿರ್ಬಂಧಿಸಲಾಗಿದೆ. ಮತ್ತು ಅಮೆರಿಕದ ವ್ಯಕ್ತಿಗಳು ಇವರೊಂದಿಗೆ ವ್ಯವಹರಿಸುವುದನ್ನು ನಿಷೇಧಿಸಲಾಗಿದೆ ಎಂದ ಅವರು,  ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ನಿರ್ಭಯವಾಗಿ ಕಾರ್ಯನಿರ್ವಹಿಸದಂತೆ ಬೈಡನ್ ಆಡಳಿತ ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.  

Similar News