ಉತ್ತರ ಕೊರಿಯಾ: ಮಕ್ಕಳಿಗೆ ‘ಬಾಂಬ್, ಗನ್’ ಇತ್ಯಾದಿ ಹೆಸರಿಡಲು ಸೂಚನೆ!

Update: 2022-12-05 17:07 GMT

 ಪ್ಯೋಂಗ್ಯಾಂಗ್, ಡಿ.5: ಮಕ್ಕಳಿಗೆ ಸೌಮ್ಯ ರೂಪದ ಹೆಸರಿಡಬಾರದು. ಅದರ ಬದಲು ‘ಬಾಂಬ್, ಗನ್, ಉಪಗ್ರಹ’ ಇತ್ಯಾದಿ ‘ದೇಶಭಕ್ತಿಯ’ ಹೆಸರನ್ನು ಇಡಬೇಕು ಎಂದು ಉತ್ತರ ಕೊರಿಯಾ ಪೋಷಕರಿಗೆ ಸೂಚಿಸಿರುವುದಾಗಿ ‘ದಿ ಮಿರರ್’ ವರದಿ ಮಾಡಿದೆ.

 ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ದೇಶಭಕ್ತಿ ಮತ್ತು ಸೈದ್ಧಾಂತಿಕ ರೀತಿಯಲ್ಲಿ ಹೆಸರಿಡಬೇಕೆಂದು ದೇಶದ ಆಡಳಿತ ಬಯಸಿದೆ. ಒಂದು ವೇಳೆ ಹೆಸರನ್ನು ಬದಲಿಸದಿದ್ದರೆ ಪೋಷಕರಿಗೆ ದಂಡ ವಿಧಿಸಲಾಗುವುದು. ನಿಯಮವನ್ನು ಅನುಸರಿಸಲು ವಿಫಲವಾಗುವವರು ‘ಸಮಾಜವಿರೋಧಿ’ ಎಂದು ದೇಶದ ಅಧ್ಯಕ್ಷ ಕಿಮ್ ಜೋಂಗ್ ಉನ್ ಭಾವಿಸುತ್ತಾರೆ ಎಂದು ಉನ್ನತ ಮೂಲಗಳನ್ನು ವರದಿ ಉಲ್ಲೇಖಿಸಿದೆ. 

Similar News