ಪ್ರತಿಷ್ಠಿತ ನೆಕ್ಸಸ್ ಮಾಲ್ ರಾಯಭಾರಿಯಾಗಿ ಅಮಿತಾಬ್ ಬಚ್ಚನ್

Update: 2022-12-05 17:43 GMT

ಮಂಗಳೂರು : "ಬ್ಲಾಕ್ ಸ್ಟೋನ್ ರಿಯಲ್ ಎಸ್ಟೇಟ್ ಫಂಡ್" ಒಡೆತನದ  ನೆಕ್ಸಸ್ ಮಾಲ್ ಇದರ ನೂತನ ಬ್ರಾಂಡ್ ಎಂಬಾಸಿಡರ್ ಆಗಿ ಖ್ಯಾತ ನಟ ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದಾರೆ.

"ಪ್ರತಿದಿನ ಏನಾದರೂ ಹೊಸತನ ಹೊಸ ಅನುಭವ ನೀಡೋಣ ಎಂಬ ವಿಚಾರಧಾರೆಯೊಂದಿಗೆ ಅಮಿತಾಬ್ ಬಚ್ಚನ್  ಕಾರ್ಯನಿರ್ವಹಿಸಲಿದ್ದಾರೆ" ಎಂದು ನೆಕ್ಸೆಸ್  ಮಾಲ್ ಮುಖ್ಯಸ್ಥ ದಿಲೀಪ್ ಶಹಗಲ್ ಹೇಳಿದ್ದಾರೆ.

ಮೇರು ನಟ ಅಮಿತಾಬ್ ಬಚ್ಚನ್ "ಈ ವಿಚಾರ ಸಂತಸ ತಂದಿದೆ ಹಾಗೂ ನಮ್ಮ ಸಹಭಾಗಿತ್ವದಲ್ಲಿ ಹೊಸತನ ಇರಲಿದೆ" ಎಂದಿದ್ದಾರೆ.

ನೆಕ್ಸಸ್  ಮಾಲ್ ದೇಶದ 13 ನಗರಗಳಲ್ಲಿ ಒಟ್ಟು 17 A ಗ್ರೇಡ್ ಮಾಲ್ ಗಳನ್ನು ಹೊಂದಿದ್ದು ಗ್ರಾಹಕರಿಗೆ ಅಂತರರಾಷ್ಟ್ರೀಯ ಮಟ್ಟದ ಅನುಭವವನ್ನು ನೀಡುತ್ತಿದೆ. 1916ರಿಂದ ಆರಂಭಗೊಂಡ ಈ ಕಂಪನಿ ಮಂಗಳೂರು ಸೇರಿ ಬೆಂಗಳೂರು, ಮೈಸೂರು, ಮುಂಬೈ, ಹೈದರಾಬಾದ್, ಉದಯಪುರ, ಅಮೃತಸರ ,ಭುವನೇಶ್ವರ, ಚಂಡೀಗಡ, ಅಹಮದಾಬಾದ್ , ಇಂದೋರ್ ನಗರಗಳಲ್ಲಿ ಮಾಲ್ ಗಳನ್ನು ಹೊಂದಿದೆ. 

Similar News