ಕೇರಳ ರಾಜ್ಯದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ವಿತ್ತ ಸಚಿವ ಕೆ. ಎನ್‌. ಬಾಲಗೋಪಾಲ್‌

Update: 2022-12-06 11:53 GMT

ತಿರುವನಂತಪುರಂ: ಕೇರಳ (Kerala) ರಾಜ್ಯವು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿರುವ ರಾಜ್ಯದ ಹಣಕಾಸು ಸಚಿವ ಕೆ ಎನ್‌ ಬಾಲಗೋಪಾಲ್‌ (K N Balagopal), ಈ ಸಮಸ್ಯೆಗೆ ಕೇಂದ್ರದ ʻತಿರುಚಿದʼ ವಿತ್ತ ನೀತಿಗಳು, ಕೋವಿಡ್‌ ಸಾಂಕ್ರಾಮಿಕ ಮತ್ತು  ನೈಸರ್ಗಿಕ ವಿಕೋಪಗಳು ಕಾರಣ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಬಿಕ್ಕಟ್ಟನ್ನು ನಿವಾರಿಸಲು ಸ್ಪಷ್ಟ ರೂಪುರೇಷೆಯೊಂದಿಗೆ ಹಾಗೂ ಆರ್ಥಿಕ ಶಿಸ್ತಿನೊಂದಿಗೆ ರಾಜ್ಯದ ಎಡರಂಗದ ಸರ್ಕಾರ ಮುಂದಡಿಯಿಡುತ್ತಿದೆ ಎಂದು ಅವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.

ಹಿಂದಿನ ವಿತ್ತ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ರೂ. 6,712 ಕೋಟಿ ಆದಾಯ ಕೊರತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಸರಿಯಾಗಿ ಆರ್ಥಿಕತೆ ನಿರ್ವಹಿಸದೇ ಇರುವುದು ಸಮಸ್ಯೆಗೆ ಕಾರಣವೇ ಎಂಬ ಪ್ರಶ್ನೆಗೆ ಸಚಿವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ನ್ಯಾಯಾಧೀಶರ ವಿರುದ್ಧ ತಾರತಮ್ಯ ಆರೋಪ ಹೊರಿಸಿದ್ದಕ್ಕೆ ಬೇಷರತ್‌ ಕ್ಷಮೆ ಕೋರಿದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ

Similar News