ಭಾರತದಲ್ಲಿ ಕೋಮು ಧ್ರುವೀಕರಣವು ನರೇಂದ್ರ ಮೋದಿಯವರ ಜಿ20 ಘೋಷಣೆಯನ್ನು ಸೋಲಿಸುತ್ತದೆ:ಸೀತಾರಾಂ ಯೆಚೂರಿ

Update: 2022-12-06 15:13 GMT

ಹೊಸದಿಲ್ಲಿ,ಡಿ.6: ದೇಶದಲ್ಲಿ ಹೆಚ್ಚಿರುವ ಕೋಮು ಧ್ರುವೀಕರಣ ಮತ್ತು ಆರ್ಥಿಕ ಕುಸಿತವನ್ನು ನಿಲ್ಲಿಸಿದರೆ ಮಾತ್ರ ಸರಕಾರವು ‘ಸಾರ್ವತ್ರಿಕ ಏಕತೆಯ ಪ್ರಜ್ಞೆಯನ್ನು ’(A sense of 'universal unity')ಉತ್ತೇಜಿಸುತ್ತದೆ ಎಂಬ ಭಾರತದ ಜಿ20 ಅಧ್ಯಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಘೋಷಣೆಯು ಸಾಕಾರಗೊಳ್ಳುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ(Sitaram Yechury)ಯವರು ಇಲ್ಲಿ ಸರ್ವಪಕ್ಷ ಸಭೆಯಲ್ಲಿ ಹೇಳಿದರು.

ಭಾರತವು ಡಿ.1ರಂದು ಜಿ20 ಅಧ್ಯಕ್ಷತೆಯ ಆವರ್ತನ ಹುದ್ದೆಯನ್ನು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ 2023ರಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಮುನ್ನ ಭಾರತದ ಅಧ್ಯಕ್ಷತೆಯನ್ನು ಯಶಸ್ವಿಗೊಳಿಸಲು ಸಹಕಾರವನ್ನು ಕೋರಲು ಮೋದಿ ಸೋಮವಾರ ಸರ್ವಪಕ್ಷ ಸಭೆಯನ್ನು ಕರೆದಿದ್ದರು.

15 ಪಕ್ಷಗಳ ನಾಯಕರು ಸಭೆಯಲ್ಲಿ ಮಾತನಾಡಿದ್ದು,ಆವರ್ತನ ಸರದಿಯಲ್ಲಿ ಭಾರತವು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಸರಕಾರವು ಇದನ್ನು ತನ್ನ ಸಾಧನೆಯನ್ನಾಗಿ ಬಿಂಬಿಸಬಾರದು ಎಂದು ಹೆಚ್ಚಿನವರು ಹೇಳಿದರು.

ಯೆಚೂರಿ ತನ್ನ ಭಾಷಣದಲ್ಲಿ ಜಿ20 ಅಧ್ಯಕ್ಷತೆಗೆ ತನ್ನ ತತ್ತ್ವವನ್ನಾಗಿ ಸರಕಾರವು ಬಿಂಬಿಸಿರುವ ‘ವಸುಧೈವ ಕುಟುಂಬಕಂ’ ('Vasudhaiva Kudumbakam')ನ ಅರ್ಥ ಏಕರೂಪತೆಯನ್ನು ಹೇರುವುದು ಎಂದಲ್ಲ,ಅದು ಸಾಮಾಜಿಕ ಬಹುತ್ವಗಳನ್ನು ಅಚರಿಸಲಾಗುವ ಜಾಗತಿಕ ಕುಟುಂಬವನ್ನು ಗುರುತಿಸುತ್ತದೆ ಎಂದರು. ವಸುಧೈವ ಕುಟುಂಬಕಂ ಸಂಸ್ಕೃತ ಮೂಲದ್ದಾಗಿದ್ದು,ಜಗತ್ತು ಒಂದು ಕುಟುಂಬ ಎನ್ನುವುದನ್ನು ಸೂಚಿಸುತ್ತದೆ.

ಭಾರತದ ಅಧ್ಯಕ್ಷತೆಯ ಒಂದು ವರ್ಷದ ಅವಧಿಯಲ್ಲಿ ‘ಒಂದು ಭೂಮಿ-ಒಂದು ಕುಟುಂಬ-ಒಂದು ಭವಿಷ್ಯ’ ಎಂಬ ಪರಿಕಲ್ಪನೆಯ ಸುತ್ತ ದೇಶಿಯ ರಾಜಕೀಯ ಪ್ರಚಾರ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮೋದಿ ಸಭೆಯಲ್ಲಿ ಪ್ರಕಟಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯೆಚೂರಿ,‘ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿನ ಈ ಆತಂಕಕಾರಿ ಪ್ರವೃತ್ತಿಗಳನ್ನು ನಿವಾರಿಸುವ ಹಾಗೂ ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಲಕ್ಷಣವನ್ನು ವ್ಯಾಖ್ಯಾನಿಸುವ ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಅಡಿಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರಕಾರವು ಪ್ರಕಟಿಸಿರುವ ಪರಿಕಲ್ಪನೆಯ ಸಾಕ್ಷಾತ್ಕಾರವು ನಿರ್ಧರಿಸಲ್ಪಡುತ್ತದೆ ’ಎಂದು  ಹೇಳಿದರು.

Similar News