ICMR ಸರ್ವರ್‌ ಹ್ಯಾಕ್ ಮಾಡಲು 6000 ಬಾರಿ ಪ್ರಯತ್ನಿಸಿದ ಹ್ಯಾಕರ್‌ಗಳು: ವರದಿ

Update: 2022-12-06 17:26 GMT

ಹೊಸದಿಲ್ಲಿ: ನವೆಂಬರ್ 30 ರಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಸರ್ವರ್ ಅನ್ನು ಹ್ಯಾಕ್ ಮಾಡಲು ಕನಿಷ್ಠ 6000 ಬಾರಿ ಹ್ಯಾಕರ್‌ಗಳು ಪ್ರಯತ್ನಿಸಿದ್ದಾರೆ , ಆದರೆ ಅವರ  ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ವರದಿಯಾಗಿದೆ.

ಹ್ಯಾಕಿಂಗ್ ಯತ್ನದ ಕುರಿತು ವಿವರವಾದ ವರದಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಸಿದ್ಧಪಡಿಸುತ್ತಿದೆ.

ಐಸಿಎಂಆರ್ ವೆಬ್‌ಸೈಟ್ ಮೇಲೆ ದಾಳಿಯನ್ನು ಹಾಂಗ್ ಕಾಂಗ್ ಮೂಲದ ಕಪ್ಪು ಪಟ್ಟಿಯಲ್ಲಿರುವ ಐಪಿ ವಿಳಾಸದ ಮೂಲಕ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.   

ಇದಕ್ಕೂ ಮುನ್ನ ನವೆಂಬರ್ 23 ರಂದು, ಹೊಸದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಆಸ್ಪತ್ರೆಯಲ್ಲಿ ಬಳಸಿದ ಸರ್ವರ್ ಒಂಬತ್ತು ಗಂಟೆಗಳ ಕಾಲ ಸ್ಥಗಿತಗೊಂಡ ಕಾರಣ ಆಸ್ಪತ್ರೆಯಲ್ಲಿನ ಸೇವೆಗಳ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿತ್ತು. ಸಂಭವನೀಯ ransomware ದಾಳಿಯಿಂದಾಗಿ ಸರ್ವರ್ ಡೌನ್ ಆಗಿದೆ ಎಂದು AIIMS ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿತ್ತು.

ನಂತರ ಡಿಸೆಂಬರ್ 2 ರಂದು, ಆಸ್ಪತ್ರೆಯ ಐದು ಮುಖ್ಯ ಸರ್ವರ್‌ಗಳು ಸೈಬರ್ ದಾಳಿಗೆ ಒಳಗಾದವು, ಇದರಿಂದಾಗಿ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗೆ ಧಕ್ಕೆಯಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸೈಬರ್ ದಾಳಿಯನ್ನು ಚೀನಾದ ಹ್ಯಾಕರ್‌ಗಳು ನಡೆಸಿರುವ ಶಂಕೆ ಇದೆ.

Similar News