ಬುಧವಾರದಿಂದ ಸಂಸತ್ ನ ಚಳಿಗಾಲದ ಅಧಿವೇಶನ : 17 ವಿಧೇಯಕಗಳ ಮಂಡನೆ ನಿರೀಕ್ಷೆ

ಹಾಲಿ ಸಂಸತ್ ಕಟ್ಟಡದಲ್ಲಿನ ಕೊನೆಯ ಚಳಿಗಾಲದ ಅಧಿವೇಶನವಾಗಲಿರುವ ಸಾಧ್ಯತೆ

Update: 2022-12-06 18:11 GMT

ಹೊಸದಿಲ್ಲಿ,ಡಿ.6:  ಸಂಸತ್ ನ ಚಳಿಗಾಲದ ಅಧಿವೇಶನವು ಬುಧವಾರ ಆರಂಭಗೊಳ್ಳಲಿದ್ದು , ಗುರುವಾರ ಪ್ರಕಟವಾಗಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶಗಳು  ಸದನದಲ್ಲಿ ಆಡಳಿತ ಪಕ್ಷ  ಹಾಗೂ ಪ್ರತಿಪಕ್ಷಗಳ ನಡುವೆ ಚರ್ಚಾ ವಿಷಯವಾಗುವ ಎಲ್ಲಾ ಸಾಧ್ಯತೆಗಳಿವೆ.

 ಚಳಿಗಾಲದ ಅಧಿವೇಶನದಲ್ಲಿ ಸದನದ 17 ಬೈಠಕ್ಗಳಲ್ಲಿ 16 ವಿಧೇಯಕಗಳು ಮಂಡನೆಯಾಗಲಿವೆ.  ಇದೇ ವೇಳೆ ಚೀನಾ ಗಡಿಯಲ್ಲಿನ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರಕಾರವನ್ನು  ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷವು ಸಜ್ಜಾಗಿದೆ.

ಸಂಸತ್ ಅಧಿವೇಶನ ಆರಂಭಗೊಂಡ ಮಾರನೆಯ ದಿನದಂದು  ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ  ಮತಏಣಿಕೆ ನಡೆಯಲಿದೆ. ಈ ಚುನಾವಣೆಗಳ ಫಲಿತಾಂಶವು ಸದನದ ಕಲಾಪಗಳ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಚುನಾವಣೆಗಳ ಫಲಿತಾಂಶವನ್ನೇ ಅಸ್ತ್ರವಾಗಿಸಿಕೊಂಡು ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ನಿರೀಕ್ಷೆಯಿದೆ.

ಈಗ ಇರುವ ಸಂಸತ್ಭವನದಲ್ಲಿ ನಡೆಯುವ ಕೊನೆಯ ಚಳಿಗಾಲದ ಅಧಿವೇಶನ  ಇದಾಗಿರುವ ಸಾಧ್ಯತೆಯೂ ದಟ್ಟವಾಗಿದೆ. ಮುಂದಿನ ಚಳಿಗಾಲದ ಅಧಿವೇಶನದ ವೇಳೆಗೆ ನೂತನ ಸಂಸತ್ ಕಟ್ಟಡವು ಕಾರ್ಯಾರಂಭಿಸುವ  ಸಾಧ್ಯತೆಯಿದೆ.

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್(Jairam Ramesh) ಅವರು ಕಳೆದ ವಾರ ನೀಡಿದ ಹೇಳಿಕೆಯೊಂದರಲ್ಲಿ ದೇಶದ ಆರ್ಥಿಕ ಪರಿಸ್ಥಿತಿ, ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುವಿಕೆ ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿಗೆಸಂಬಂಧಿಸಿದ ವಿಷಯಗಳನ್ನು ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾವಿಸಲಿದೆ ಎಂದು ತಿಳಿಸಿದ್ದರು.

ಹಣದುಬ್ಬರ ಹೆಚ್ಚಳ, ಬೆಲೆಯೇರಿಕೆ, ರೂಪಾಯಿ ಮೌಲ್ಯ  ಕುಸಿತ, ರಫ್ತು ಕುಸಿತ ಹಾಗೂ ಜಿಎಸ್ಟಿ  ಬಗ್ಗೆಯೂ  ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚಿಸಲಿದೆ ಎಂದವರು ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ  17 ವಿಧೇಯಕಗಳು ಮಂಡನೆಯಾಗಲಿದ್ದು, ಜೈವಿಕ(ತಿದ್ದುಪಡಿ)  ವಿಧೇಯಕ 2021, ಬಹು ರಾಜ್ಯ ಸಹಕಾರಿ ಸೊಸೈಟಿಗಳ (ತಿದ್ದುಪಡಿ) ವಿಧೇಯಕ 2022 ಹಾಗೂ ಅರಣ್ಯ ಸಂರಕ್ಷಣಾ ತಿದ್ದುಪಡಿ ವಿಧೇಯಕ 2022   ಇವುಗಳಿಗೆ ಈಗಾಗಲೇ ಕಾಂಗ್ರೆಸ್ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.

ರಾಷ್ಟ್ರೀಯ ದಂತ ಆಯೋದ ಸ್ಥಾಪನೆಯನ್ನು ಕೋರುವ ರಾಷ್ಟ್ರೀಯ ದಂತ ಆಯೋಗ ವಿಧೇಯಕ, ರಾಷ್ಟ್ರೀಯ ನರ್ಸಿಂಗ್ ಹಾಗೂ  ಪ್ರಸವಶಾಸ್ತ್ರ ಆಯೋಗ ವಿಧೇಯಕ, ಅರಣ್ಯ(ಸಂರಕ್ಷಣೆ) ತಿದ್ದುಪಡಿ ವಿಧೇಯಕ, ಕರಾವಳಿ ಮತ್ಸಕೃಷಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ , ಈ  ಸಲದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲ್ಪಡುವ ಕೆಲವು ಪ್ರಮುಖ ವಿಧೇಯಕಗಳಾಗಿವೆ.

ಕಳೆದ 22 ತಿಂಗಳುಗಳಲ್ಲಿ ಭಾರತ ಹಾಗೂ ಚೀನಾ ನಡುವೆ ಗಡಿ ಉದ್ವಿಗ್ನತೆಯುಂಟಾಗಿದೆ. ಈ ಬಗ್ಗೆ ಸಂಸತ್ನಲ್ಲಿ ಚರ್ಚೆಯೇ ಆಗಿಲ್ಲ. ಈ ವಿಷಯವನ್ನು ಕಾಂಗ್ರೆಸ್ ಸಂಸತ್ನಲ್ಲಿ ಚರ್ಚಿಸಲು ಬಯಸಿದೆ

ಜೈರಾಮ್ ರಮೇಶ್ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

Similar News