ಕತಾರ್ ನಲ್ಲಿ ರಸ್ತೆ ಅಪಘಾತ: ಬಂಟ್ವಾಳ ಮೂಲದ ಚಾಲಕ ಮೃತ್ಯು

Update: 2022-12-08 04:02 GMT

ಬಂಟ್ವಾಳ, ಡಿ.8: ಇಲ್ಲಿನ‌ ವ್ಯಕ್ತಿಯೋರ್ವ ವಿದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲು ನಿವಾಸಿ ಫಹದ್ ಮೃತಪಟ್ಟ ಅವಿವಾಹಿತ ಯುವಕ.

ಫಹಾದ್ ಅವರು ಐದು ತಿಂಗಳ ಹಿಂದೆಯಷ್ಟೇ ಕತಾರ್ ಗೆ ತೆರಳಿದ್ದರು. ಬಂಟ್ವಾಳದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಇವರು ಕತಾರ್ ನಲ್ಲಿ ಕಾರು ಚಾಲಕ ಉದ್ಯೋಗದ ನಿಮಿತ್ತ ತೆರಳಿದ್ದರು.  ಸೌದಿ ಅರೇಬಿಯಾದ ಕುಟುಂಬವೊಂದರ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ ಯುವಕ ಇಂದು ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಫಹದ್ ಅವರ ತಂದೆಯೂ ಟಿಪ್ಪರ್ ಚಾಲಕನಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ತಂದೆ , ತಾಯಿ ಹಾಗೂ ತಮ್ಮನನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Similar News