ರಾಜೀನಾಮೆ ಸಲ್ಲಿಸಿದ ಬಳಿಕ ಹಿಮಾಚಲ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-12-08 17:01 GMT

ಶಿಮ್ಲಾ (ಹಿಮಾಚಲಪ್ರದೇಶ), ಡಿ. 8: ಹಿಮಾಚಲಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿರುವ ಬಿಜೆಪಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ (Jairam Thakur)ಗುರುವಾರ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ (Rajendra Vishwanath Arlekar)ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.

68 ಸದಸ್ಯ ಬಲದ ಹಿಮಾಚಲ ಪ್ರದೇಶವಿಧಾನ ಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದಿದೆ. ಅದು ಈ ಬಾರಿ ಕಳೆದ ಬಾರಿಗಿಂತ 19 ಸ್ಥಾನಗಳನ್ನು ಹೆಚ್ಚಾಗಿ ಪಡೆದಿದೆ. ಬಿಜೆಪಿಯು 25 ಸ್ಥಾನಗಳನ್ನು ಗಳಿಸಿದೆ. ಕಳೆದ ಬಾರಿಗೆಹೋಲಿಸಿದರೆ, ಈ ಬಾರಿ ಅದು 19 ಸ್ಥಾನಗಳನ್ನು ಕಳೆದುಕೊಂಡಿದೆ.

ಇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಆಪ್‌ಗೆ ಖಾತೆತೆರೆಯಲು ಸಾಧ್ಯವಾಗಿಲ್ಲ.

‘‘ಜನಾದೇಶವನ್ನು ನಾನುಗೌರವಿಸುತ್ತೇನೆ. ಸ್ವಲ್ಪವೇ ಹೊತ್ತಿನಲ್ಲಿ, ನಾನು ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದೇನೆ’’ ಎಂದು ರಾಜೀನಾಮೆ ಸಲ್ಲಿಸುವ ಸ್ವಲ್ಪ ಮೊದಲು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್ (Thakur)ಹೇಳಿದರು.

Similar News