ಇಸ್ರೇಲ್ ಪಡೆಯಿಂದ 3 ಪೆಲೆಸ್ತೀನೀಯರ ಹತ್ಯೆ: ವರದಿ

Update: 2022-12-08 18:14 GMT

ಜೆರುಸಲೇಂ, ಡಿ.8: ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಗುರುವಾರ ಇಸ್ರೇಲ್ ಪಡೆಯ ಗುಂಡೇಟಿಗೆ ಮೂವರು ಪೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಪೆಲೆಸ್ತೀನ್‌ನ ಆರೋಗ್ಯ ಇಲಾಖೆ ಹೇಳಿದೆ.

ಜೆನಿನ್ ನಗರದಲ್ಲಿ ಗುರುವಾರ ಬೆಳಿಗ್ಗೆ ಇಸ್ರೇಲಿ ಆಕ್ರಮಣಕಾರರ ಗುಂಡೇಟಿಗೆ ಮೂವರು ಪೆಲೆಸ್ತೀನೀಯರು ಬಲಿಯಾಗಿದ್ದಾರೆ ಎಂದು ಪೆಲೆಸ್ತೀನ್‌ನ ಆರೋಗ್ಯ ಇಲಾಖೆ ಹೇಳಿದೆ. ಈ ಮಧ್ಯೆ, ಜೆನಿನ್‌ನಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಇಸ್ರೇಲ್ ಸೇನೆ ಟ್ವೀಟ್ ಮಾಡಿದೆ.

Similar News