ಕ್ಯಾಚ್ ಪಡೆಯುವ ಭರದಲ್ಲಿ 4 ಹಲ್ಲುಗಳನ್ನು ಉದುರಿಸಿಕೊಂಡ ಶ್ರೀಲಂಕಾದ ಆಲ್ ರೌಂಡರ್ ಕರುಣರತ್ನೆ!

Update: 2022-12-09 08:53 GMT

ಕೊಲಂಬೊ: ಗಾಯವಾಗುವುದು  ಕ್ರೀಡೆಯ ಒಂದು ಭಾಗವಾಗಿದೆ. ಸಂಪರ್ಕ ಕ್ರೀಡೆಯಲ್ಲದ ಕ್ರಿಕೆಟ್‌ನಲ್ಲಿಯೂ ಗಾಯವಾಗುವುದು  ಸಾಮಾನ್ಯ. ಬುಧವಾರ ಲಂಕಾ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಅಪರೂಪದ ಗಾಯ ಸಂಭವಿಸಿದೆ. ಕ್ಯಾಂಡಿ ಫಾಲ್ಕನ್ಸ್ ಹಾಗೂ  ಗಾಲೆ ಗ್ಲಾಡಿಯೇಟರ್ಸ್ ನಡುವಿನ ಪಂದ್ಯದ ವೇಳೆ  ಶ್ರೀಲಂಕಾದ ಆಲ್ ರೌಂಡರ್ ಚಾಮಿಕಾ ಕರುಣರತ್ನೆ Sri Lanka all-rounder Chamika Karunaratne ಕ್ಯಾಚ್ ಹಿಡಿಯುವ ಭರದಲ್ಲಿ ತನ್ನ  ನಾಲ್ಕು ಹಲ್ಲುಗಳನ್ನು ಉದುರಿಸಿಕೊಂಡರು. ಆಫ್ ಸೈಡ್‌ನಲ್ಲಿ ಸರ್ಕಲ್ ಒಳಗೆ ಫೀಲ್ಡಿಂಗ್ ಮಾಡುತ್ತಿದ್ದ ಚಾಮಿಕಾ ಕ್ಯಾಚ್ ತೆಗೆದುಕೊಳ್ಳಲು ಹಿಂದಕ್ಕೆ ಓಡಿದರು.

ಆದರೆ, ಅವರಿಗೆ ಚೆಂಡನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಲಿಲ್ಲ. ಅವರು ಚೆಂಡನ್ನು ಕ್ಯಾಚ್ ಪಡೆಯುವ  ಮೊದಲು ಚೆಂಡು ಅವರ ಮುಖಕ್ಕೆ ಬಡಿದಿದೆ. ಇದರಿಂದ ರಕ್ತ ಸೋರಲಾರಂಭಿಸಿದೆ.

ನೋವಿನಿಂದ ಬಳಲುತ್ತಿದ್ದ ಅವರು  ತಾನು ಕ್ಯಾಚ್ ಪಡೆದ ಸಂಭ್ರಮ ಆಚರಿಸದಂತೆ ತನ್ನ ಸಹ ಆಟಗಾರರಿಗೆ ತಿಳಿಸಿದರು.

ಆ  ನಂತರ ಕರುಣರತ್ನ ಅವರನ್ನು ಗಾಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮುಂದಿನ ಹಂತದ ಪಂದ್ಯಾವಳಿಗೆ ಸಿದ್ಧರಾಗುತ್ತಾರೆ ಎಂದು ಫಾಲ್ಕನ್ಸ್ ಆಡಳಿತ ಮಂಡಳಿ ತಿಳಿಸಿದೆ.

"ಚಾಮಿಕ ಕರುಣರತ್ನ ಅವರು ಇಂದಿನ ಆಟದಿಂದ ಹೊರಗುಳಿದಿದ್ದಾರೆ. ಕ್ಯಾಚ್ ಪಡೆಯುವ ವೇಳೆ ಅವರು ನಾಲ್ಕು ಹಲ್ಲುಗಳು ಉದುರಿಹೋಗಿವೆ.ಟೀಮ್ ವೈದ್ಯರೊಂದಿಗೆ ತಕ್ಷಣದ ಶಸ್ತ್ರಚಿಕಿತ್ಸೆಗಾಗಿ ಗಾಲೆಗೆ ತೆರಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು,  ಕ್ಯಾಂಡಿ ಪಂದ್ಯಕ್ಕೆ  ಲಭ್ಯವಿರುತ್ತಾರೆ" ಎಂದು ಕ್ಯಾಂಡಿ ಫಾಲ್ಕನ್ಸ್ ತಂಡದ ನಿರ್ದೇಶಕ, ಶ್ಯಾಮ್ ಇಂಪೆಟ್ , ಮಾಧ್ಯಮಗಳಿಗೆ ತಿಳಿಸಿದರು.

ಈ ಪಂದ್ಯವನ್ನು ಫಾಲ್ಕನ್ಸ್ ಐದು ರನ್‌ಗಳಿಂದ ಗೆದ್ದಿತು.

Similar News