ದೇಶದಲ್ಲಿ ಆಕಸ್ಮಿಕ ಸಾವಿಗೆ ಕಾರಣ, ಕೋವಿಡ್ ಸಂಬಂಧದ ತನಿಖೆಗೆ ಡಿಸಿಡಬ್ಲ್ಯು ಆಗ್ರಹ

Update: 2022-12-11 17:29 GMT

ಹೊಸದಿಲ್ಲಿ, ಡಿ. 7: ದೇಶದಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೆ ಕಾರಣ ಹಾಗೂ ಇದಕ್ಕೆ ಕೋವಿಡ್ ಸಂಬಂಧದ ಕುರಿತು ತನಿಖೆ ನಡೆಸುವಂತೆ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್)ಗೆ ನೋಟಿಸು ಜಾರಿ ಮಾಡಿದೆ.  

ದೇಶದಲ್ಲಿ ಆಕಸ್ಮಿಕ ಸಾವಿನ ಕುರಿತು ಮಾಧ್ಯಮಗಳ ಹಲವು ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿರುವ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಈ ನೋಟಿಸು ನೀಡಿದೆ. 

ಈ ಸಾವಿನ ಕುರಿತು ತನಿಖೆ ನಡೆಸಲು ಸಂಬಂಧಿತ ಸಂಸ್ಥೆ ಯಾವುದಾದರೂ ಸಮಿತಿ ರೂಪಿಸಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಈ ನೋಟಿಸ್‌ನಲ್ಲಿ ಕೋರಲಾಗಿದೆ. ಕೋವಿಡ್‌ನಿಂದ ಜನರ ಆರೋಗ್ಯದ ಮೇಲಾಗಿರುವ ದೀರ್ಘಕಾಲೀನ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸರಕಾರಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಕೂಡ ಆಯೋಗ ಕೇಳಿದೆ. 

Similar News