ಮೊದಲ ಟೆಸ್ಟ್: ಪೂಜಾರ, ಶ್ರೇಯಸ್ ಅಯ್ಯರ್ ಅರ್ಧಶತಕ, ಬಾಂಗ್ಲಾ ವಿರುದ್ಧ ಹಿಡಿತ ಸಾಧಿಸಿದ ಭಾರತ

Update: 2022-12-14 09:23 GMT

ಚಿತ್ತಗಾಂಗ್, ಡಿ.14: ಹಿರಿಯ ಬ್ಯಾಟರ್ ಚೇತೇಶ್ವರ ಪೂಜಾರ (ಔಟಾಗದೆ 67 ರನ್) ಹಾಗೂ ಶ್ರೇಯಸ್ ಅಯ್ಯರ್ (ಔಟಾಗದೆ 58) ಅರ್ಧಶತಕದ ಕೊಡುಗೆಯ  ನೆರವಿನಿಂದ ಬುಧವಾರ ಆರಂಭವಾದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ಹಿಡಿತ ಸಾಧಿಸಿದೆ.

68 ಓವರ್ ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ.

ಭಾರತವು ಒಂದು ಹಂತದಲ್ಲಿ 48 ರನ್ ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಶುಭಮನ್ ಗಿಲ್(20 ರನ್), ಕೆ.ಎಲ್.ರಾಹುಲ್(22 ರನ್) ಮೊದಲ ವಿಕೆಟಿಗೆ 41 ರನ್ ಸೇರಿಸಿದ ಬಳಿಕ ಬೇರ್ಪಟ್ಟರು.  ಮಾಜಿ ನಾಯಕ ವಿರಾಟ್ ಕೊಹ್ಲಿ(1 ರನ್) ಬೇಗನೆ ಪೆವಿಲಿಯನ್ ಸೇರಿದರು.

ಆಗ 4ನೇ ವಿಕೆಟಿಗೆ 64 ರನ್ ಸೇರಿಸಿದ ಪೂಜಾರ ಹಾಗೂ ರಿಷಭ್ ಪಂತ್(46 ರನ್ ) ತಂಡವನ್ನು ಆಧರಿಸಿದರು.

ಪಂತ್ ಔಟಾದ ಬಳಿಕ ಶ್ರೇಯಸ್ ಜೊತೆ ಕೈಜೋಡಿಸಿದ ಪೂಜಾರ 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 100 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಬಾಂಗ್ಲಾ ಬೌಲಿಂಗ್ ವಿಭಾಗದಲ್ಲಿ ತೈಜುಲ್ ಇಸ್ಲಾಂ (2-66)ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

Similar News