ಅದಾನಿಗೆ ಸಾವಿರಾರು ಕೋಟಿ ಲಾಭಕ್ಕಾಗಿ ಕಾನೂನು ತಿದ್ದುಪಡಿ!
ಜಾರ್ಖಂಡ್‌ನ ಗೊಡ್ಡಾ ಕಲ್ಲಿದ್ದಲು ವಿದ್ಯುತ್ ಘಟಕದ ಕಥೆ ಬಿಚ್ಚಿಟ್ಟ 'ವಾಶಿಂಗ್ಟನ್ ಪೋಸ್ಟ್'
ಇಂದು ಅದಾನಿ ಗ್ರೂಪ್ ಎಂಟು ವಿಮಾನ ನಿಲ್ದಾಣಗಳು ಮತ್ತು 13 ಬಂದರುಗಳನ್ನು ಹೊಂದಿದೆ. ಮಾಧ್ಯಮ, ರಕ್ಷಣಾ ಮತ್ತು ಸಿಮೆಂಟ್ ಕ್ಷೇತ್ರಗಳಲ್ಲಿ ವೇಗವಾಗಿ ಚಾಚಿಕೊಂಡಿದೆ ಮತ್ತು ಭಾರತದ ಪ್ರಮುಖ ನವೀಕರಿಸಬಹುದಾದ ಇಂಧನ ಪೂರೈಕೆದಾರ ಕಂಪೆನಿಗಳಲ್ಲಿ ಒಂದಾಗಿದೆ. ಅದಾನಿ ನಿವ್ವಳ ಆದಾಯವು 2020ರಲ್ಲಿನ 74,414 ಕೋಟಿ ರೂ.ಗಳಿಂದ 10,50,065 ಕೋಟಿ ರೂ.ಗಳಿಗೆ (ಅಂದರೆ 9 ಶತಕೋಟಿ ಡಾಲರ್‌ನಿಂದ 127 ಶತಕೋಟಿ ಡಾಲರ್‌ಗೆ) ಏರಿದೆ. ಅದಾನಿ ಗ್ರೂಪ್‌ನ ಆದಾಯದ ಶೇ.60ಕ್ಕಿಂತ ಹೆಚ್ಚು ಕಲ್ಲಿದ್ದಲು ಸಂಬಂಧಿತ ವ್ಯವಹಾರಗಳಿಂದಲೇ ಬರುತ್ತದೆ ಎಂದು, ಅದಾನಿಯ ಏಳು ಕಂಪೆನಿಗಳ ತ್ರೈಮಾಸಿಕ ವರದಿಗಳು ಮತ್ತು ಉದ್ಯಮ ತಜ್ಞರನ್ನು ಉಲ್ಲೇಖಿಸಿ ವಾಶಿಂಗ್ಟನ್ ಪೋಸ್ಟ್ ವರದಿ ದಾಖಲಿಸಿದೆ.
ಇಂದು ಅದಾನಿ ಗ್ರೂಪ್ ಎಂಟು ವಿಮಾನ ನಿಲ್ದಾಣಗಳು ಮತ್ತು 13 ಬಂದರುಗಳನ್ನು ಹೊಂದಿದೆ. ಮಾಧ್ಯಮ, ರಕ್ಷಣಾ ಮತ್ತು ಸಿಮೆಂಟ್ ಕ್ಷೇತ್ರಗಳಲ್ಲಿ ವೇಗವಾಗಿ ಚಾಚಿಕೊಂಡಿದೆ ಮತ್ತು ಭಾರತದ ಪ್ರಮುಖ ನವೀಕರಿಸಬಹುದಾದ ಇಂಧನ ಪೂರೈಕೆದಾರ ಕಂಪೆನಿಗಳಲ್ಲಿ ಒಂದಾಗಿದೆ. ಅದಾನಿ ನಿವ್ವಳ ಆದಾಯವು 2020ರಲ್ಲಿನ 74,414 ಕೋಟಿ ರೂ.ಗಳಿಂದ 10,50,065 ಕೋಟಿ ರೂ.ಗಳಿಗೆ (ಅಂದರೆ 9 ಶತಕೋಟಿ ಡಾಲರ್‌ನಿಂದ 127 ಶತಕೋಟಿ ಡಾಲರ್‌ಗೆ) ಏರಿದೆ. ಅದಾನಿ ಗ್ರೂಪ್‌ನ ಆದಾಯದ ಶೇ.60ಕ್ಕಿಂತ ಹೆಚ್ಚು ಕಲ್ಲಿದ್ದಲು ಸಂಬಂಧಿತ ವ್ಯವಹಾರಗಳಿಂದಲೇ ಬರುತ್ತದೆ ಎಂದು, ಅದಾನಿಯ ಏಳು ಕಂಪೆನಿಗಳ ತ್ರೈಮಾಸಿಕ ವರದಿಗಳು ಮತ್ತು ಉದ್ಯಮ ತಜ್ಞರನ್ನು ಉಲ್ಲೇಖಿಸಿ ವಾಶಿಂಗ್ಟನ್ ಪೋಸ್ಟ್ ವರದಿ ದಾಖಲಿಸಿದೆ.
ಭಾರತದಲ್ಲಿ ಗೌತಮ್ ಅದಾನಿಯವರ ಕಲ್ಲಿದ್ದಲು ಉದ್ಯಮಕ್ಕೆ ನೆರವಾಗಲು ಮತ್ತು ಕನಿಷ್ಠ 8,273 ಕೆ ಟಿ ರೂ. ಉಳಿಸಲು ಸರಕಾರ ಕನಿಷ್ಠ ಮೂರು ಬಾರಿ ಕಾನೂನುಗಳನ್ನು ಪರಿಷ್ಕರಿಸಿದೆ ಎಂದು "W
ashington Post' ವೆಬ್‌ಸೈಟ್ ತನ್ನ ವರದಿಯಲ್ಲಿ ಆರೋಪಿಸಿದೆ. ಪ್ರಬಲ ಉದ್ಯಮಿಯ ಪರವಾಗಿ ರಾಜಕೀಯ ಇಚ್ಛೆಯು ಹೇಗೆ ಮಣಿಯುತ್ತದೆ ಎಂಬುದಕ್ಕೆ ಅದಾನಿಯವರ ಗೊಡ್ಡಾ ಕಲ್ಲಿದ್ದಲು ಸ್ಥಾವರದ ಕಥೆ ಸ್ಪಷ್ಟ ಉದಾಹರಣೆಯಾಗಿದೆ ಎಂದು "How political will often favors a coal billionaire and his dirty fossil fuel' ಎಂಬ ಶೀರ್ಷಿಕೆಯ ವರದಿಯಲ್ಲಿ ವಾಶಿಂಗ್ಟನ್ ಪೋಸ್ಟ್ ಹೇಳಿದೆ.
ಈಗಿನ ಮತ್ತು ಮಾಜಿ ಭಾರತೀಯ ಅಧಿಕಾರಿಗಳು, ಅದಾನಿ ಗ್ರೂಪ್ ಮಾಜಿ ಉದ್ಯೋಗಿಗಳು, ಉದ್ಯಮದ ಅಧಿಕಾರಿಗಳು ಮತ್ತು ತಜ್ಞರು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಸಂದರ್ಶನಗಳು, ಅಲ್ಲದೆ ಗೌಪ್ಯ ವಿದ್ಯುತ್ ಖರೀದಿ ಒಪ್ಪಂದ ಸೇರಿದಂತೆ ನೂರಾರು ಪುಟಗಳ ಕಂಪೆನಿ ಮತ್ತು ಸರಕಾರಿ ದಾಖಲೆಗಳು, ಅಷ್ಟೇನೂ ಆರ್ಥಿಕ ಮಹತ್ವವಿರದ ಯೋಜನೆಗೆ ಭಾರತೀಯ ಅಧಿಕಾರಿಗಳು ಹೇಗೆ ಪದೇ ಪದೇ ಅನುಕೂಲ ಮಾಡಿಕೊಟ್ಟರು ಎಂಬುದನ್ನು ಬಹಿರಂಗಪಡಿಸುತ್ತವೆ ಎಂದು, 2022ರ ಡಿಸೆಂಬರ್ 9ರಂದು ಪ್ರಕಟವಾಗಿರುವ ವರದಿಯಲ್ಲಿ ವಾಶಿಂಗ್ಟನ್ ಪೋಸ್ಟ್ ಬರೆದಿದೆ.
2015ರಲ್ಲಿ ಪ್ರಧಾನಿ ಮೋದಿಯವರ ಮೊದಲ ಬಾಂಗ್ಲಾದೇಶ ಪ್ರವಾಸದ ನಂತರ ಆ ದೇಶದ ವಿದ್ಯುತ್ ಪ್ರಾಧಿಕಾರ ಅದಾನಿಯವರೊಂದಿಗೆ 1,600 ಮೆಗಾವ್ಯಾಟ್ ಕಲ್ಲಿದ್ದಲು ವಿದ್ಯುತ್ ಸ್ಥಾವರ ನಿರ್ಮಿಸಲು 14,064 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತು. ಸ್ಥಾವರ ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಗಡಿಯಿಂದ 60 ಮೈಲುಗಳಷ್ಟು ದೂರದಲ್ಲಿದೆ ಎಂದು ಹೇಳುವ ವಾಶಿಂಗ್ಟನ್ ಪೋಸ್ಟ್ ವರದಿ, ಅದಾನಿ ಬಾಂಗ್ಲಾದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಕೆಲವು ಭಾರತೀಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು ಎಂಬುದನ್ನು ಪ್ರಸ್ತಾಪಿಸುತ್ತದೆ.
ಭಾರತಕ್ಕೆ ಈ ಯೋಜನೆಯ ಪ್ರಯೋಜನವಿಲ್ಲ. ಸ್ಥಾವರ ಕಾರ್ಯಾರಂಭವಾಗುತ್ತಿದ್ದಂತೆ ಅದು ಉತ್ಪಾದಿಸುವ ಎಲ್ಲಾ ವಿದ್ಯುತ್, ಹೆಚ್ಚುವರಿ ವಿದ್ಯುತ್ ಸಾಮರ್ಥ್ಯವನ್ನು ಹೊಂದಿರುವ ಮತ್ತು ಹೆಚ್ಚಿನ ಅಗತ್ಯವಿಲ್ಲದ ಬಾಂಗ್ಲಾದೇಶಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುತ್ತದೆ ಎಂದು ದಾಖಲೆಗಳು ತೋರಿಸುತ್ತವೆ ಎಂದು ವಾಶಿಂಗ್ಟನ್ ಪೋಸ್ಟ್ ಹೇಳುತ್ತದೆ.
ಗೊಡ್ಡಾ ಭಾರತದ ಎರಡನೇ ಬಡ ರಾಜ್ಯವಾದ ಜಾರ್ಖಂಡ್‌ನಲ್ಲಿದೆ. ಜಾರ್ಖಂಡ್‌ನಲ್ಲಿ ನಿರ್ಮಿಸಲಾದ ವಿದ್ಯುತ್ ಸ್ಥಾವರಗಳು ತಮ್ಮ ಉತ್ಪಾದಿತ ವಿದ್ಯುತ್‌ನ ಶೇ.25ರಷ್ಟನ್ನು ರಾಜ್ಯಕ್ಕೆ ರಿಯಾಯಿತಿ ದರದಲ್ಲಿ ಪೂರೈಸುತ್ತವೆ. ಆದರೆ ಅದಾನಿ ಕಂಪೆನಿ ಗೊಡ್ಡಾ ವಿಚಾರದಲ್ಲಿ ವಿನಾಯಿತಿ ಕೋರಿದ್ದು ಮಾತ್ರವಲ್ಲ, ಬದಲಿಗೆ ತಾನೇ ಜಾರ್ಖಂಡ್‌ಗೆ ಭಾರತದ ಇತರ ಭಾಗಗಳಲ್ಲಿನ ತನ್ನ ಸ್ಥಾವರಗಳಿಂದ ವಿದ್ಯುತ್ತನ್ನು ಹೆಚ್ಚಿನ ಬೆಲೆಗೆ ಪೂರೈಸುವ ಪ್ರಸ್ತಾಪವನ್ನಿಟ್ಟಿತು. ಜಾರ್ಖಂಡ್‌ನ ಹಣಕಾಸು ಮತ್ತು ಇಂಧನ ಅಧಿಕಾರಿಗಳು ತಡೆದರು ಎಂದು ವಾಶಿಂಗ್ಟನ್ ಪೋಸ್ಟ್ ವರದಿ ವಿವರಿಸಿದೆ.
ಯೋಜನೆಗೆ ತಡೆ ಬೀಳುವ ಹಂತದಲ್ಲಿ ಗೌತಮ್ ಅದಾನಿ ಕಿರಿಯ ಸಹೋದರ ಮತ್ತು ಅದಾನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅದಾನಿ, ಜಾರ್ಖಂಡ್ ಬಿಜೆಪಿ ಸರಕಾರದ ಆಗಿನ ಮುಖ್ಯಮಂತ್ರಿ ರಘುಬರ್ ದಾಸ್ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಂತೆ, ಕೆಲಸ ತುರ್ತಾಗಿ ಆಗಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸುತ್ತಾರೆ. 2016ರ ಅಕ್ಟೋಬರ್ ವೇಳೆಗೆ ಜಾರ್ಖಂಡ್ ಸರಕಾರ ಶೇ.25ರಷ್ಟು ನಿಯಮವನ್ನು ತಿದ್ದುಪಡಿ ಮಾಡಿ, ಅದಾನಿ ಯೋಜನೆಗೆ ಅನುಕೂಲ ಮಾಡಿಕೊಡುತ್ತದೆ ಎಂದು ತನ್ನ ವರದಿಯಲ್ಲಿ ವಾಶಿಂಗ್ಟನ್ ಪೋಸ್ಟ್ ವಿವರಿಸಿದೆ.
ರಾಜ್ಯದ ತಾತ್ವಿಕ ಅನುಮೋದನೆ ಬಳಿಕ ಪರಿಸರ ಅನುಮತಿಗೆ ಸಲ್ಲಿಸಿದ ಪ್ರಸ್ತಾವಕ್ಕೆ ಮೊದಲ ಪರಿಸರ ಪರಿಶೀಲನಾ ಸಮಿತಿ ಅಸಮಾಧಾನ ವ್ಯಕ್ತಪಡಿಸುತ್ತದೆ. ಐದು ತಿಂಗಳ ಕಾಲ ಸಮಿತಿಯು ಕಂಪೆನಿಯೊಂದಿಗೆ ತೀವ್ರ ಚರ್ಚೆಗಳನ್ನು ನಡೆಸುತ್ತದೆ. ಆದರೆ ಅದರ ಅವಧಿ ಮುಗಿದು ಅದನ್ನು ವಿಸರ್ಜಿಸುವ ಹೊತ್ತಿಗೂ ಅನುಮೋದನೆ ಸಿಗುವುದಿಲ್ಲ. ಎರಡನೇ ಸಮಿತಿಯ ರಚನೆ ನಂತರ, 2016ರ ಕೊನೆಯಲ್ಲಿ, ಯೋಜನೆಗೆ ಗ್ರಾಮಸ್ಥರಿಂದ ಇದ್ದ ಎಲ್ಲಾ ವಿರೋಧಗಳನ್ನೂ ಬದಿಗೆ ತಳ್ಳಿ, ಒಂದೇ ಒಂದು ಸಭೆಯಲ್ಲೇ ಗೊಡ್ಡಾ ಸ್ಥಾವರಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತದೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಹೇಳಿದೆ.
2018ರ ಆರಂಭದಲ್ಲಿ ಅದಾನಿ ಕಂಪೆನಿ ಅಗತ್ಯ ಪರವಾನಿಗೆಗಳನ್ನು ಪಡೆದಿತ್ತು. ಆದರೆ ಇನ್ನೂ ಒಂದು ಅಡಚಣೆ ಇತ್ತು. ಸಾವಿರಾರು ಕೋಟಿ ರೂ. ಮೌಲ್ಯದ ಕಲ್ಲಿದ್ದಲಿನ ಸಂಭಾವ್ಯ ತೆರಿಗೆ ಬಿಲ್‌ಗಳನ್ನು ತಪ್ಪಿಸಲು ಆ ವರ್ಷ ಫೆಬ್ರವರಿಯಲ್ಲಿ ಕಂಪೆನಿಯು ಗೊಡ್ಡಾ ಸೈಟ್‌ನಲ್ಲಿ ಎಸ್‌ಈಝಡ್ ರಚಿಸಲು ಅರ್ಜಿ ಸಲ್ಲಿಸಿತು. 2016ರಲ್ಲಿ ವಾಣಿಜ್ಯ ಸಚಿವಾಲಯವು ಒಂದೇ ವಿದ್ಯುತ್ ಸ್ಥಾವರದ ಸುತ್ತ ತೆರಿಗೆ ಮುಕ್ತ ವಲಯಗಳನ್ನು ನಿಷೇಧಿಸಿದ್ದರಿಂದ, ಅದನ್ನು ಉಲ್ಲೇಖಿಸಿ, ಈ ವಿನಂತಿಯನ್ನು ನಿರಾಕರಿಸಲಾಯಿತು. ತಿಂಗಳ ನಂತರ, ಸಚಿವಾಲಯ ತನ್ನ ಮನಸ್ಸನ್ನು ಬದಲಿಸಿತು. ಅಧಿಕಾರಿಗಳು ಎಸ್‌ಈಝಡ್ ನಿಯಮಾವಳಿಗಳ ತಿದ್ದುಪಡಿ ಪ್ರಸ್ತಾಪವನ್ನಿಟ್ಟರು. 2019ರ ಫೆಬ್ರವರಿಯಲ್ಲಿ ಆಗಿನ ವಾಣಿಜ್ಯ ಸಚಿವ ಸುರೇಶ್ ಪ್ರಭು ನಿರ್ದೇಶನದ ಮೇರೆಗೆ ಅದಾನಿ ಪ್ರಸ್ತಾಪದ ಮರುಪರಿಶೀಲನೆ ನಡೆದು, ಅದಾನಿ ಪ್ರಸ್ತಾಪಿಸಿರುವಂತಹ ತೆರಿಗೆ ಮುಕ್ತ ವಲಯ ಇಂಧನ ರಫ್ತುಗಳನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ವಾದಿಸುವುದರೊಂದಿಗೆ, ಒಂದು ತಿಂಗಳ ನಂತರ, ಅದಾನಿ ಕಂಪೆನಿಗೆ ಎಸ್‌ಈಝಡ್ ದೊರಕಿತು ಎಂದು ವಾಶಿಂಗ್ಟನ್ ಪೋಸ್ಟ್ ವರದಿಯಲ್ಲಿ ಹೇಳಲಾಗಿದೆ.
ತನ್ನ ವರದಿಯಲ್ಲಿ ವಾಶಿಂಗ್ಟನ್ ಪೋಸ್ಟ್ ಲೆಕ್ಕಾಚಾರ ಹಾಕಿರುವಂತೆ, ಗೊಡ್ಡಾಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದರ ಮೇಲೆ ಅದಾನಿ ಕಂಪೆನಿಗೆ ವರ್ಷಕ್ಕೆ 289 ಕೋಟಿ ರೂ. ಉಳಿಯುತ್ತದೆ. ಪ್ರತೀ ಟನ್ ಕಲ್ಲಿದ್ದಲು ಆಮದುಗಳಿಗೆ ಸಾಮಾನ್ಯವಾಗಿ 400 ರೂ.ಗಳಷ್ಟು ತೆರಿಗೆ ವಿಧಿಸಲಾಗುತ್ತದೆ. ವಾಣಿಜ್ಯ ಸಚಿವಾಲಯವು ಎಸ್‌ಈಝಡ್ ಅನ್ನು ಹೇಗೆ ಅನುಮೋದಿಸಿತು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಭಾರತದ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತಾನು ಮಾಡಿದ್ದ ಮನವಿಗೆ ಉತ್ತರವಾಗಿ, ಅಂತಹ ಯಾವುದೇ ದಾಖಲೆಗಳು ಇಲ್ಲವೆಂದು ಅಧಿಕಾರಿಗಳಿಂದ ಉತ್ತರ ಬಂತು. ಮಾಜಿ ವಾಣಿಜ್ಯ ಸಚಿವ ಪ್ರಭು ಮತ್ತು ಜಾರ್ಖಂಡ್ ಮಾಜಿ ಸಿಎಂ ದಾಸ್ ಅವರ ಆಪ್ತ ಕಾರ್ಯದರ್ಶಿಗಳಿಂದಲೂ ಇದಕ್ಕೆ ಉತ್ತರ ಸಿಗಲಿಲ್ಲ ಎಂದು ವಾಶಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ಹೇಳಿದೆ.
ತನಗೆ ಲಭ್ಯವಾದ ಗೌಪ್ಯ 163 ಪುಟಗಳ ವಿದ್ಯುತ್ ಖರೀದಿ ಒಪ್ಪಂದವನ್ನು ತನ್ನ ಕೋರಿಕೆಯ ಮೇರೆಗೆ ಪರಿಶೀಲಿಸಿರುವ ಮೂವರು ಉದ್ಯಮ ವಿಶ್ಲೇಷಕರ ಪ್ರಕಾರ, 25 ವರ್ಷಗಳ ಗೊಡ್ಡಾ ಒಪ್ಪಂದವು ಬಾಂಗ್ಲಾದೇಶಕ್ಕೆ ಅಷ್ಟೇನೂ ಅನುಕೂಲಕರವಾಗಿಲ್ಲ. ಸ್ಥಾವರ ಯಾವುದೇ ವಿದ್ಯುತ್ ಉತ್ಪಾದಿಸುತ್ತದೆಯೇ ಎಂಬುದನ್ನು ಲೆಕ್ಕಿಸದೆ, ಬಾಂಗ್ಲಾದೇಶ ಅದಾನಿಗೆ ವರ್ಷಕ್ಕೆ ಸುಮಾರು 3,723 ಕೋಟಿ ರೂ. ಮೊತ್ತದ ಸಾಮರ್ಥ್ಯ ಮತ್ತು ನಿರ್ವಹಣೆ ಶುಲ್ಕವನ್ನು ಪಾವತಿಸಬೇಕು. ಬಾಂಗ್ಲಾದೇಶವು ವಿದ್ಯುತ್ತನ್ನು ಯಾವಾಗ ಪಡೆಯುತ್ತದೆ ಎಂಬುದು ಸ್ಪಷ್ಟವಿಲ್ಲ. ಏಕೆಂದರೆ ಅದು ಪ್ರಸರಣ ಮಾರ್ಗದ ಭಾಗವನ್ನು ಪೂರ್ಣಗೊಳಿಸಿಲ್ಲ ಮತ್ತು ಬಾಂಗ್ಲಾದೇಶಕ್ಕೆ ಈ ಸ್ಥಾವರದ ಅಗತ್ಯವೂ ಇಲ್ಲದಿರಬಹುದು. ಯಾಕೆಂದರೆ, ಸರಕಾರಿ ಅಂಕಿಅಂಶಗಳ ಪ್ರಕಾರ, ಬಾಂಗ್ಲಾದೇಶ ಈಗ ಗರಿಷ್ಠ ಬೇಡಿಕೆಗಿಂತಲೂ ಶೇ.40ರಷ್ಟು ಹೆಚ್ಚು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ವಿವರಿಸಿದೆ.
ಫೆಬ್ರವರಿಯಲ್ಲಿ ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಕಲ್ಲಿದ್ದಲು ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳುವ ವಾಶಿಂಗ್ಟನ್ ಪೋಸ್ಟ್, ವಿದೇಶಿ ವಿದ್ಯುತ್ ಪೂರೈಕೆದಾರರೊಂದಿಗಿನ ಇತರ ಒಪ್ಪಂದಗಳು, ಕಲ್ಲಿದ್ದಲಿನ ಬೆಲೆಯು ಗಗನಕ್ಕೇರಿದರೆ ಬಾಂಗ್ಲಾದೇಶ ಪಾವತಿಸುವ ಬೆಲೆಗಳ ಮೇಲೆ ಮಿತಿಯನ್ನು ಹಾಕುವ ಷರತ್ತುಗಳನ್ನು ಒಳಗೊಂಡಿದೆ. ಆದರೆ ಗೊಡ್ಡಾ ಒಪ್ಪಂದದ ಪ್ರಕಾರ, ಬಾಂಗ್ಲಾದೇಶವು ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಿದೆ ಎಂಬ ವಿವರಗಳನ್ನು ಉಲ್ಲೇಖಿಸಿದೆ.
ಗೊಡ್ಡಾಗೆ ಕಲ್ಲಿದ್ದಲನ್ನು ಪ್ರಾಯಶಃ ಅದಾನಿಯವರ ಸ್ವಂತ ಸಾಮ್ರಾಜ್ಯವೇ ಪೂರೈಸುತ್ತದೆ. ಪ್ರಾಜೆಕ್ಟ್‌ನ ಪರಿಸರ ದಾಖಲೆಗಳು ವರ್ಷಕ್ಕೆ 7 ಮಿಲಿಯನ್ ಟನ್‌ಗಳನ್ನು ವಿದೇಶದಿಂದ ತರಿಸಲಾಗುವುದು ಎಂದು ತೋರಿಸುತ್ತವೆ. ಕೈಗಾರಿಕಾ ವಿಶ್ಲೇಷಕರು ಹೇಳುವ ಪ್ರಕಾರ, ಕಲ್ಲಿದ್ದಲು ಬಹುಶಃ ಅದಾನಿ ಹಡಗುಗಳಲ್ಲಿ ಪೂರ್ವ ಭಾರತದ ಅದಾನಿ ಒಡೆತನದ ಬಂದರಿಗೆ ಬಂದು ನಂತರ ಸ್ಥಾವರವನ್ನು ತಲುಪುತ್ತದೆ. ಉತ್ಪಾದಿಸಿದ ವಿದ್ಯುತ್ ಅನ್ನು ಅದಾನಿ ನಿರ್ಮಿಸಿದ ಹೈ-ವೋಲ್ಟೇಜ್ ಲೈನ್ ಮೂಲಕ ಗಡಿದೇಶಕ್ಕೆ ಕಳುಹಿಸಲಾಗುತ್ತದೆ. ಒಪ್ಪಂದದ ಅಡಿಯಲ್ಲಿ, ಹಡಗು ಮತ್ತು ಪ್ರಸರಣ ವೆಚ್ಚವನ್ನು ಬಾಂಗ್ಲಾದೇಶವೇ ಪಾವತಿಸಬೇಕು. ಇಂಧನ ವಿಶ್ಲೇಷಕರ ಪ್ರಕಾರ, ಬಾಂಗ್ಲಾದೇಶವು ಅದಾನಿ ವಿದ್ಯುತ್ತನ್ನು ದೇಶದಲ್ಲಿನ ವಿದ್ಯುತ್‌ಗಿಂತ ಐದು ಪಟ್ಟು ಹೆಚ್ಚು ಬೆಲೆಗೆ ಖರೀದಿಸುತ್ತದೆ. ಕಲ್ಲಿದ್ದಲು ಬೆಲೆ ಯುದ್ಧಪೂರ್ವದ ಮಟ್ಟಕ್ಕೆ ಮರಳಿದರೂ, ಅದಾನಿ ಪೂರೈಸುವ ವಿದ್ಯುತ್‌ಗೆ ಬಾಂಗ್ಲಾದೇಶದ ದೇಶೀಯ ಕಲ್ಲಿದ್ದಲು ಸ್ಥಾವರದ ವೆಚ್ಚಕ್ಕಿಂತ ಶೇ.33ರಷ್ಟು ಹೆಚ್ಚು ವೆಚ್ಚವನ್ನು ಬಾಂಗ್ಲಾದೇಶ ಭರಿಸಬೇಕಾಗುತ್ತದೆ. ಬಾಂಗ್ಲಾದೇಶದ ಕಪ್ಟೈ ಸೌರ ಸ್ಥಾವರಕ್ಕೆ ಹೋಲಿಸಿದರೆ, ಅದಾನಿ ಪೂರೈಸುವ ವಿದ್ಯುತ್ ಐದು ಪಟ್ಟು ದುಬಾರಿ ಎಂದು ವರದಿಯಲ್ಲಿ ವಾಶಿಂಗ್ಟನ್ ಪೋಸ್ಟ್ ವಿವರಿಸಿದೆ.
ಬಾಂಗ್ಲಾದೇಶದ ಪರಿಸರ ಪ್ರಚಾರಕ ಹಸನ್ ಮೆಹದಿ ಪ್ರಕಾರ, ಗೊಡ್ಡಾ ಸ್ಥಾವರದಿಂದಾಗಿ ಬಾಂಗ್ಲಾದೇಶದ ಭವಿಷ್ಯವು ಕಲ್ಲಿದ್ದಲಿಗೆ ಮತ್ತಷ್ಟು ಅಂಟಿಕೊಳ್ಳುತ್ತದೆ. ಸೌರಶಕ್ತಿ ಅಗ್ಗವಾಗಿರುವಾಗ, ಅಗತ್ಯವಿಲ್ಲದ ಕಲ್ಲಿದ್ದಲು ಶಕ್ತಿಗಾಗಿ ಹೆಚ್ಚು ಪಾವತಿಸುವ ಸ್ಥಿತಿ ತಲೆದೋರುತ್ತದೆ. ಇಂಧನ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ 2021ರಲ್ಲಿ ಯೋಜಿತ 18 ಕಲ್ಲಿದ್ದಲು ವಿದ್ಯುತ್ ಯೋಜನೆಗಳಲ್ಲಿ 10ನ್ನು ರದ್ದುಗೊಳಿಸಿದೆ ಎಂದು ಹೇಳಿರುವ ವಾಶಿಂಗ್ಟನ್ ಪೋಸ್ಟ್, ಅದಾನಿ ಜೊತೆಗಿನ ಒಪ್ಪಂದವು ಪ್ರತಿಕೂಲವಾಗಿದ್ದರೂ ಬಾಂಗ್ಲಾದೇಶದ ಪ್ರಧಾನಿ ಹಸೀನಾ ಭಾರತದ ವಿರುದ್ಧ ಹೋಗಲಾರರು. ಅದಾನಿಯವರಿಗೆ ಸಂತುಷ್ಟವಾದರೆ ಮೋದಿಯವರಿಗೆ ಸಂತೋಷವಾಗುತ್ತದೆ ಎಂಬುದು ಅವರಿಗೆ ಗೊತ್ತು ಎಂದು ಬಾಂಗ್ಲಾದೇಶದ ಅಧಿಕಾರಿಯೊಬ್ಬರು ಹೇಳಿರುವುದನ್ನೂ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಧಾನಿಯಾಗಿ ಮೋದಿ ಅಧಿಕಾರ ವಹಿಸಿಕೊಂಡ ಒಂದೇ ವರ್ಷದಲ್ಲೇ ಖಾಸಗಿ ಖರೀದಿದಾರರಿಗೆ ಕಲ್ಲಿದ್ದಲು ರಿಯಾಯಿತಿ ನೀಡಲು ಕೇಂದ್ರ ಕ್ಯಾಬಿನೆಟ್ ಪರಿಸ್ಕೃತ ನಿಯಮಾವಳಿಗಳನ್ನು ಮಾಡಿತ್ತು. ಅದಾನಿ ಕಂಪೆನಿ 10 ಮಿಲಿಯನ್ ಟನ್ ಅಥವಾ ಮೂರನೇ ಒಂದು ಭಾಗದಷ್ಟು ಸ್ಟಾಕ್‌ಗಳನ್ನು ಸ್ವೀಕರಿಸುವ ಮೂಲಕ ಅತಿದೊಡ್ಡ ಪಾಲನ್ನು ಗಳಿಸಿದೆ ಎಂದು ಸರಕಾರಿ ಅಂಕಿಅಂಶಗಳು ತೋರಿಸುತ್ತವೆ ಎಂದು ವಾಶಿಗ್ಟನ್ ಪೋಸ್ಟ್ ವರದಿ ಉಲ್ಲೇಖಿಸುತ್ತದೆ.
ಅದಾನಿ ಸೇರಿದಂತೆ ಉದ್ಯಮಿಗಳಿಗೆ ರಿಯಾಯಿತಿಯಲ್ಲಿ ಕಲ್ಲಿದ್ದಲು ಸರಬರಾಜು ಮಾಡುವುದನ್ನು ವಿರೋಧಿಸಿದ್ದ ಹಿರಿಯ ಭಾರತೀಯ ಅಧಿಕಾರಿಯೊಬ್ಬರನ್ನು ಮೋದಿ ಆಡಳಿತ ಕೆಲಸದಿಂದಲೇ ತೆಗೆದುಹಾಕಿತು. ಗೊಡ್ಡಾ ವಿದ್ಯುತ್ ಸ್ಥಾವರ ವಿರೋಧಿಸಿ ಸ್ಥಳೀಯ ಶಾಸಕರೊಬ್ಬರು ಉಪವಾಸ ಸತ್ಯಾಗ್ರಹ ನಡೆಸಿದಾಗ ಅವರನ್ನು ಆರು ತಿಂಗಳ ಕಾಲ ಜೈಲಿನಲ್ಲಿರಿಸಲಾಯಿತು. ಯೋಜನೆಯ ಬಗ್ಗೆ ತಿಳಿದ ಗ್ರಾಮಸ್ಥರು ಅದರ ವಿರುದ್ಧ ನಿಲ್ಲುತ್ತಿದ್ದಂತೆ ನೂರಾರು ಪೊಲೀಸರಿಂದ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಯಿತು ಎಂದು ವಾಶಿಂಗ್ಟನ್ ಪೋಸ್ಟ್ ಹೇಳಿದೆ.
2015ರಲ್ಲಿ ಅದಾನಿ ಪ್ರತಿನಿಧಿಗಳು ಗೊಡ್ಡಾಗೆ ಬಂದಾಗ, ಸಾವಿರ ಎಕರೆ ಭೂಮಿ ಮತ್ತು ಸ್ಥಳೀಯ ನಿವಾಸಿಗಳ ಬೆಂಬಲವನ್ನು ಪಡೆಯುವ ದರ್ದು ಅವರಿಗಿತ್ತು. ಹಾಗಾಗಿಯೇ, ಜಮೀನು ನೀಡುವ ರೈತರಿಗೆ ಪರಿಹಾರ ಮತ್ತು ಇಲ್ಲದಿರುವ ಕೃಷಿ ಕಾರ್ಮಿಕರಿಗೆ ಉದ್ಯೋಗ, ಶಾಲೆಗಳು, ಶೌಚಾಲಯಗಳು, ಮಕ್ಕಳಿಗೆ ಶೂಗಳು, ಬಟ್ಟೆಗಳು ಹೀಗೆ ಭರವಸೆಯ ಮಹಾಪೂರವನ್ನೇ ಹರಿಸಲಾಗಿತ್ತು. ಹೆಚ್ಚಿನ ನಿವಾಸಿಗಳು ಹುಲ್ಲಿನ ಛಾವಣಿಯ ಮನೆಗಳಲ್ಲಿರುವ, ಶೇ.60ರಷ್ಟು ಮಹಿಳೆಯರು ಅನಕ್ಷರಸ್ಥರಾಗಿರುವ ಬಡ ಪ್ರದೇಶದಲ್ಲಿ ಇಂಥ ಭರವಸೆಗಳು ಆಸೆ ಹುಟ್ಟಿಸುವಂತಿದ್ದವು. ಅನೇಕ ಭೂಮಾಲಕರು ಅದನ್ನು ಬೆಂಬಲಿಸಿದರು. ಆದರೆ ನೂರಾರು ಇತರ ನಿವಾಸಿಗಳು, ಹೆಚ್ಚಾಗಿ ಕೆಳ ಜಾತಿಯ ಕೃಷಿ ಕಾರ್ಮಿಕರು ಅನುಮಾನ ವ್ಯಕ್ತಪಡಿಸಿದ್ದರು ಎಂಬ ವಿವರಗಳು ವಾಶಿಂಗ್ಟನ್ ಪೋಸ್ಟ್ ವರದಿಯಲ್ಲಿವೆ.
ನಿವೃತ್ತ ಸ್ಥಳೀಯ ಶಾಲಾ ಶಿಕ್ಷಕ ಚಿಂತಾಮಣಿ ಸಾಹು ಯೋಜನೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸತೊಡಗಿದರು. ಸ್ಥಳೀಯ ಶಾಸಕ ಪ್ರದೀಪ್ ಯಾದವ್ ಕೂಡ ಅದಾನಿ ವಿರುದ್ಧ ಮಾತನಾಡಲು ಪ್ರಾರಂಭಿಸಿದರು. ಸ್ಥಾವರವು ದಿನಕ್ಕೆ 18,000 ಟನ್ ಕಲ್ಲಿದ್ದಲನ್ನು ಸುಡುತ್ತದೆ ಮತ್ತು ವರ್ಷಕ್ಕೆ 36 ದಶಲಕ್ಷ ಕ್ಯೂಬಿಕ್ ಲೀಟರ್ ನೀರು ಬೇಕಾಗುತ್ತದೆ ಎಂದು ಪರಿಸರವಾದಿಗಳು ಜನಸಮೂಹಕ್ಕೆ ತಿಳಿಸಿದರು. 900 ಅಡಿ ಎತ್ತರದ ಹೊಗೆ ಚಿಮಣಿಗಳು ಎಂಟು ಮೈಲುಗಳಷ್ಟು ಮಾಲಿನ್ಯವನ್ನು ಹೇಗೆ ಉಂಟುಮಾಡುತ್ತವೆ ಮತ್ತು ಅದು ಬೆಳೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಹವಾಮಾನ ಹೇಗೆ ಕೆಡುತ್ತದೆ ಎಂಬುದರ ಕುರಿತು ಅವರು ಮಾತನಾಡಿದರು ಎಂದು, ಯೋಜನೆಗೆ ವಿರೋಧ ಬಂದ ಸಂದರ್ಭದ ವಿವರಗಳನ್ನು ವಾಶಿಂಗ್ಟನ್ ಪೋಸ್ಟ್ ವರದಿ ಕೊಡುತ್ತದೆ.
ಯೋಜನೆ ಮುಂದುವರಿಯಬೇಕೇ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳು 2016ರ ಡಿಸೆಂಬರ್‌ನಲ್ಲಿ ನಡೆಸಿದ ಸಭೆಗೆ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗಷ್ಟೇ ಅವಕಾಶವಿತ್ತು. ಸಭಾಂಗಣದ ಹೊರಗೆ ಆಕ್ರೋಶಿತ ಪ್ರತಿಭಟನಾಕಾರರು ಪ್ರವೇಶ ಪಡೆಯಲು ಪ್ರಯತ್ನಿಸಿ ಗೊಂದಲಮಯ ವಾತಾವರಣ ಏರ್ಪಟ್ಟಿದ್ದ ಹೊತ್ತಲ್ಲಿ, ಒಳಗೆ ಜಿಲ್ಲಾ ಆಡಳಿತಾಧಿಕಾರಿ ಯೋಜನೆಗೆ ಬೆಂಬಲಿಸುವವರು ಕೈ ಎತ್ತಿ ಎಂದು ಕೇಳುತ್ತ, ಶೇ.80ರಷ್ಟು ಜನರು ಬೆಂಬಲಿಸುತ್ತಾರೆ ಎಂದು ಘೋಷಿಸಿದರು. 2017ರ ಮಾರ್ಚ್‌ನಲ್ಲಿ ನಡೆದ ಎರಡನೇ ಸಭೆಯಲ್ಲೂ, ಯೋಜನೆ ವಿರೋಧಿಯಾದ ಶಾಸಕ ಯಾದವ್ ಮತ್ತು ಬೆಂಬಲಿಗರು ಮಾತನಾಡದಂತೆ ನೂರಾರು ಪೊಲೀಸ್ ಅಧಿಕಾರಿಗಳು ತಡೆದರು. ಗದ್ದಲವಾಯಿತು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದರು. ಗಾಳಿಯಲ್ಲಿ ಅಶ್ರುವಾಯು ಮತ್ತು ಗುಂಡಿನ ದಾಳಿಯನ್ನೂ ನಡೆಸಿದರು ಎಂದು ವರದಿ ವಿವರಿಸಿದೆ.
ಕಡೆಗೆ 2017ರ ಎಪ್ರಿಲ್‌ನಲ್ಲಿ ಯಾದವ್ ಮತ್ತು ಸಾಹು ಒಂದು ಅಂತಿಮ ತಂತ್ರವನ್ನು ಕೈಗೊಂಡರು. ಹಗಲು ಉಪವಾಸ. ರಾತ್ರಿ ವೇಳೆ ಅದಾನಿ, ಮನೆಗೆ ಹೋಗು! ಎಂದು ಪಠಿಸುತ್ತಾ ಗೊಡ್ಡಾ ಮೂಲಕ ಮೆರವಣಿಗೆ ನಡೆಸುವ ಆ ತಂತ್ರದ ಮೂಲಕ ದೊಡ್ಡ ಜನಸಮೂಹವನ್ನು ಮುನ್ನಡೆಸಿದರು. ಏಳನೇ ದಿನ ಬೆಳಗಾಗುವ ಮೊದಲು ಯಾದವ್ ಬಂಧನವಾಗಿತ್ತು. ಆರು ತಿಂಗಳು ಜೈಲಿನಲ್ಲಿರಿಸಲಾಯಿತು. ಅವರ ಚಳವಳಿ ಎಲ್ಲಾ ತೀವ್ರತೆಯನ್ನು ಕಳೆದುಕೊಂಡಿತು. ಭೂಮಾಲಕರು ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರತಿಭಟನಾಕಾರರು ಸೋತಿದ್ದರು. ನೋಡನೋಡುತ್ತಲೇ, ಬಡವರ ಗುಡಿಸಲಾಚೆಯ ಗೋಡೆಯ ಹಿಂದೆ ಗಗನದೆತ್ತರಕ್ಕೆ ಸ್ಥಾವರ ಬೆಳೆದು ನಿಂತಿತು. ಅವರು ನೀಡಿದ್ದ ಭರವಸೆಗಳು ಮಾತ್ರ ಎದ್ದು ನಿಲ್ಲಲೇ ಇಲ್ಲ. ಅದಾನಿ ಸ್ಥಾವರದಲ್ಲಿ ಹೆಚ್ಚಿನವರಿಗೆ ಕೆಲಸವೂ ಸಿಗಲಿಲ್ಲ ಎಂದು ಸ್ಥಳೀಯರು ಹೇಳುವುದನ್ನು ವಾಶಿಂಗ್ಟನ್ ಪೋಸ್ಟ್ ವರದಿ ಉಲ್ಲೇಖಿಸಿದೆ.
ಇಂದು ಅದಾನಿ ಗ್ರೂಪ್ ಎಂಟು ವಿಮಾನ ನಿಲ್ದಾಣಗಳು ಮತ್ತು 13 ಬಂದರುಗಳನ್ನು ಹೊಂದಿದೆ. ಮಾಧ್ಯಮ, ರಕ್ಷಣಾ ಮತ್ತು ಸಿಮೆಂಟ್ ಕ್ಷೇತ್ರಗಳಲ್ಲಿ ವೇಗವಾಗಿ ಚಾಚಿಕೊಂಡಿದೆ ಮತ್ತು ಭಾರತದ ಪ್ರಮುಖ ನವೀಕರಿಸಬಹುದಾದ ಇಂಧನ ಪೂರೈಕೆದಾರ ಕಂಪೆನಿಗಳಲ್ಲಿ ಒಂದಾಗಿದೆ. ಅದಾನಿ ನಿವ್ವಳ ಆದಾಯವು 2020ರಲ್ಲಿನ 74,414 ಕೋಟಿ ರೂ.ಗಳಿಂದ 10,50,065 ಕೋಟಿ ರೂ.ಗಳಿಗೆ (ಅಂದರೆ 9 ಶತಕೋಟಿ ಡಾಲರ್‌ನಿಂದ 127 ಶತಕೋಟಿ ಡಾಲರ್‌ಗೆ) ಏರಿದೆ. ಅದಾನಿ ಗ್ರೂಪ್‌ನ ಆದಾಯದ ಶೇ.60ಕ್ಕಿಂತ ಹೆಚ್ಚು ಕಲ್ಲಿದ್ದಲು ಸಂಬಂಧಿತ ವ್ಯವಹಾರಗಳಿಂದಲೇ ಬರುತ್ತದೆ ಎಂದು, ಅದಾನಿಯ ಏಳು ಕಂಪೆನಿಗಳ ತ್ರೈಮಾಸಿಕ ವರದಿಗಳು ಮತ್ತು ಉದ್ಯಮ ತಜ್ಞರನ್ನು ಉಲ್ಲೇಖಿಸಿ ವಾಶಿಂಗ್ಟನ್ ಪೋಸ್ಟ್ ವರದಿ ದಾಖಲಿಸಿದೆ.
ಕಲ್ಲಿದ್ದಲು ವ್ಯವಹಾರವು ವಿಸ್ತರಿಸಿದಂತೆ, ಎಲ್ಲ ವಿರೋಧ ಮತ್ತು ಕಾನೂನು ತೊಡಕುಗಳನ್ನು ಗೆಲ್ಲುವ ಅದಾನಿ ಸಾಮರ್ಥ್ಯವೂ ಹೆಚ್ಚಿದೆ. ಆಸ್ಟ್ರೇಲಿಯದಲ್ಲಿ, ದೇಶದ ಅತಿ ದೊಡ್ಡ ಕಲ್ಲಿದ್ದಲು ಗಣಿಯನ್ನು ಅಭಿವೃದ್ಧಿಪಡಿಸುವ ತನ್ನ ಯೋಜನೆಗಳನ್ನು ನಿಲ್ಲಿಸಲು ಪರಿಸರವಾದಿಗಳು ನಡೆಸಿದ ವರ್ಷಗಳಷ್ಟು ದೀರ್ಘ ಹೋರಾಟದ ವಿರುದ್ಧ ಅದಾನಿ ಗೆದ್ದಿದ್ದಾರೆ. ಗೊಡ್ಡಾ ಸ್ಥಾವರಕ್ಕೆ ಕಲ್ಲಿದ್ದಲು ಒದಗಿಸುವ ಅದಾನಿ ಕಾರ್ಮೈಕಲ್ ಗಣಿ ಡಿಸೆಂಬರ್ 2021ರ ಡಿಸೆಂಬರ್‌ನಲ್ಲಿ ಉತ್ಪಾದನೆ ಪ್ರಾರಂಭಿಸಿದೆ ಎಂದೂ ವಾಶಿಂಗ್ಟನ್ ಪೋಸ್ಟ್ ವರದಿ ಹೇಳಿದೆ.
ಭಾರತದಲ್ಲಿ, ಆಮದು ಮಾಡಿಕೊಂಡ ಕಲ್ಲಿದ್ದಲು ಮತ್ತು ಯಂತ್ರೋಪಕರಣಗಳ ವೆಚ�