ಅರ್ಜೆಂಟೀನಾಗೆ ವಿಶ್ವಕಪ್ ಗೆದ್ದುಕೊಟ್ಟ 'ಚಿನ್ನದ ಕೈ'!

Update: 2022-12-20 06:31 GMT

ಹೊಸದಿಲ್ಲಿ: ಕಳೆದ ದಶಕದಲ್ಲಿ ಅರ್ಜೆಂಟೀನಾದ ಎಮಿಲಿನೊ ಮಾರ್ಟಿನೆರ್ ಒಬ್ಬರು ಅನಪೇಕ್ಷಿತ ಆಟಗಾರ. ಆ ಬಳಿಕ ಬೆರ್ನ್ಡ್ ಲೆನೊ ಅವರ ಒಂದು ಗಾಯ ಎಲ್ಲವನ್ನೂ ಬದಲಾಯಿಸಿತು. ರವಿವಾರ ʼಚಿನ್ನದ ಕೈಗಳ ಮಾಂತ್ರಿಕ’ ವಿಶ್ವಚಾಂಪಿಯನ್ ಎನಿಸಿದರು.

ಕನೆಕ್ಟ್ ಆಕ್ಸ್‌ಫರ್ಡ್, ಶೇಫೀಲ್ಡ್ ವೆನ್ಸ್‌ಡೇ, ರೊಥೇಮ್ ಯುನೈಟೆಡ್, ವೋಲ್ವ್ಸ್, ಗೆಟಾಫೆ ಮ್ತು ರೀಡಿಂಗ್ ಹೀಗೆ 2011ರ ಬಳಿಕ ಒಂದರಿಂದ ಇನ್ನೊಂದು ಕ್ಲಬ್‌ಗೆ ಹದಿ ಹರೆಯದ ಹುಡುಗನಾಗಿ ಅಲೆದಾಡಿದ್ದ ಯುವ ಆಟಗಾರ ಇದೀಗ ಇಡೀ ದೇಶದ ಫುಟ್ಬಲ್ ಪ್ರೇಮಿಗಳ ಆರಾಧ್ಯ ದೈವ. ಅರ್ಸೆನಲ್ ಸ್ಕೌಟ್ ಖಂಡಮಟ್ಟದ ಟೂರ್ನಿಯಲ್ಲಿ ಈ ಅರ್ಜೆಂಟೀನಿ ಯುವಕನನ್ನು ಪತ್ತೆ ಮಾಡಿತು. ಈತನ ಜತೆಗೆ ಒಪ್ಪಂದ ಮಾಡಿಕೊಂಡಿತು. ಕ್ಲಬ್ ಜತೆಗೆ ಸಹಿ ಮಾಡುವ ಇತರ ಹದಿಹರೆಯದವರಂತೆ ಮಾರ್ಟಿನೆರ್ ಕೂಡಾ ಕ್ಲಬ್‌ನ ವಯೋಮಿತಿ ತಂಡದ ಪರವಾಗಿ ಆಡಿದರು. ಆರಂಭದಲ್ಲಿ ಅಂಥ ಭರವಸೆಯ ಆಟಗಾರ ಎನಿಸಿಕೊಳ್ಳದಿದ್ದರೂ ಕ್ರಮೇಣ ಯುವ ಆಟಗಾರನ ಪ್ರತಿಭೆ ಅನಾವರಣಗೊಂಡಿತು.

2020ರಲ್ಲಿ ಬೆರ್ನ್ಡ್ ಲೆನೊ ಅವರಿಗೆ ಆದ ಗಾಯ, ಮಾರ್ಟಿನೆರ್ ಅದೃಷ್ಟ ಖುಲಾಯಿಸಲು ಕಾರಣವಾಯಿತು. ಲೆನೊ ಬದಲಿಗೆ ಮಾರ್ಟಿನೆರ್ ಅವರನ್ನು ಪ್ರಥಮ ಆದ್ಯತೆಯ ಗೋಲ್‌ಕೀಪರ್ ಆಗಿ ಉಳಿಸಿಕೊಳ್ಳಲು ಒತ್ತಡ ಹೆಚ್ಚಿತು. ಆದರೆ ಅರ್ಸೆನಲ್ ಲೆನೊ ಅವರನ್ನು ಉಳಿಸಿಕೊಂಡು ಮಾರ್ಟಿನೆರ್ ಅವರನ್ನು 2020ರ ಸೆಪ್ಟೆಂಬರ್‌ನಲಿ ಆಸ್ಟನ್ ವಿಲ್ಲಾಗೆ ಮಾರಾಟ ಮಾಡಿತು. 2021ರ ಕೋಪಾ ಅಮೆರಿಕ ಟೂರ್ನಿಯಲ್ಲಿನ ಅದ್ಭುತ ಪ್ರದರ್ಶನದ ಬಳಿಕ ಅರ್ಜೆಂಟೀನಾ ತಂಡದ ಎರಡನೇ ಆಯ್ಕೆಯ ಕೀಪರ್ ಅಗಿ ಬಡ್ತಿ ಪಡೆದರು.

ವಿಶ್ವಕಪ್‌ಗೆ 18 ತಿಂಗಳು ಬಾಕಿ ಇರುವಾಗ ಅರ್ಜೆಂಟೀನಾದ ನಂಬರ್ ವನ್ ಕೀಪರ್ ಆದರು. ವಿಶ್ವಕಪ್‌ನಲ್ಲಿ ಅವರ ಪ್ರದರ್ಶನ, ಅರ್ಜೆಂಟೀನಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಹೀಗೆ 2012ರಲ್ಲಿ ಇಂಗ್ಲೆಂಡ್‌ನ ನಾಲ್ಕನೇ ಸ್ತರದ ಆಕ್ಸ್‌ಫರ್ಡ್ ಯುನೈಟೆಡ್ ಕ್ಲಬ್‌ನಿಂದ ವೃತ್ತಿ ಪಯಣ ಆರಂಭಿಸಿದ ಒಂದು ದಶಕದಲ್ಲಿ ವಿಶ್ವದ ಅತ್ಯುತ್ತಮ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Similar News