ಗೂಂಡಾಗಳಿಲ್ಲದ ಫುಟ್ಬಾಲ್ ಟೂರ್ನಮೆಂಟ್: ಖತರ್ ವಿಶ್ವಕಪ್ ಆಯೋಜನೆಯ ಬಗ್ಗೆ ಪೀಟರ್ಸನ್ ಪ್ರಶಂಸೆ

ಪ್ರತಿ ಫುಟ್ಬಾಲ್ ಪಂದ್ಯಾವಳಿಯನ್ನು ಮಧ್ಯಪ್ರಾಚ್ಯದಲ್ಲಿ ನಡೆಸಬೇಕು ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

Update: 2022-12-20 14:06 GMT

ಲಂಡನ್: ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ (Former England cricketer Kevin Pietersen) ಅವರು 2022 ರ ಫಿಫಾ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿರುವ  ಖತರ್ ದೇಶವನ್ನು ಶ್ಲಾಘಿಸಿದ್ದಾರೆ.  ಪ್ರತಿ ಫುಟ್ಬಾಲ್ ಪಂದ್ಯಾವಳಿಯನ್ನು ಮಧ್ಯಪ್ರಾಚ್ಯದಲ್ಲಿ ನಡೆಸಬೇಕು ಎಂದು ಹೇಳಿದ್ದಾರೆ.

ಮಾಜಿ ಇಂಗ್ಲೆಂಡ್ ಬ್ಯಾಟರ್ ಪೀಟರ್ಸನ್ 2022 ರ ಫಿಫಾ ವಿಶ್ವಕಪ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟರ್ ನಲ್ಲಿ ವ್ಯಕ್ತಪಡಿಸಿದರು. ಇದು ಗೂಂಡಾಗಳಿಲ್ಲದ ಉತ್ತಮ ಪಂದ್ಯಾವಳಿ ಎಂದು ಹೇಳಿದರು.

“ಗೂಂಡಾಗಳು ಇಲ್ಲದ ಒಂದು ಫುಟ್ಬಾಲ್ ಪಂದ್ಯಾವಳಿ. ಕಳೆದ ವರ್ಷದ ವೆಂಬ್ಲಿಯಲ್ಲಿ ನಡೆದ ನಾಚಿಕೆಗೇಡಿನ ಘಟನೆ.  ಈ ಬಾರಿ ಖತರ್ ನಲ್ಲಿ ನಡೆದ ಪಂದ್ಯಾವಳಿ, ಇವರೆಡನ್ನು  ಹೋಲಿಸಿದರೆ ಖತರ್ ನಲ್ಲಿ ನಡೆದ ಪಂದ್ಯಾವಳಿ ಅತ್ಯುತ್ತಮವಾಗಿದೆ! ಪ್ರತಿ ಫುಟ್ಬಾಲ್ ಪಂದ್ಯಾವಳಿಯು ಮಧ್ಯ ಪ್ರಾಚ್ಯದಲ್ಲಿ ನಡೆಸುವುದು ಒಳ್ಳೆಯದು .  ನಮ್ಮ ಅಭಿಮಾನಿಗಳ ಅನುಭವವು ಸ್ಮರಣೀಯವಾಗಿರುತ್ತದೆ! ”ಎಂದು ಪೀಟರ್ಸನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲುಸೈಲ್ ಸ್ಟೇಡಿಯಮ್ ನಲ್ಲಿ ರವಿವಾರ ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನ ತಂಡ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿ ಮೂರನೇ ಬಾರಿ ಪ್ರಶಸ್ತಿ ಜಯಿಸಿದೆ.

Similar News