ವರ್ಷದಲ್ಲಿ 5ನೇ ಬೆಲೆಮಿತಿ ನಿಗದಿ: ಮತ್ತಷ್ಟು ಔಷಧಗಳು ಅಗ್ಗ

Update: 2022-12-22 02:14 GMT

ಕೊಲ್ಕತ್ತಾ: ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಮಂಗಳವಾರ 127 ಔಷಧಿಗಳ ಗರಿಷ್ಠ ಬೆಲೆಗೆ ಮಿತಿ ವಿಧಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷದಲ್ಲಿ ಸತತ 5ನೇ ಬಾರಿಗೆ ಕೆಲ ಔಷಧಗಳ ಬೆಲೆ ಅಗ್ಗವಾಗಲಿದೆ. ಪಾರಾಸೆಟಮೋಲ್‌ನಂಥ ಕೆಲ ಔಷಧಿಗಳು ಈ ವರ್ಷ ಎರಡನೇ ಬಾರಿಗೆ ಬೆಲೆ ಇಳಿಕೆ ಕಂಡಿವೆ. ಆದಾಗ್ಯೂ ಮೊಂಟೆಲುಕಾಸ್ಟ್ ಮತ್ತು ಮೆಟ್‌ಫಾರ್ಮೋಲಿನ್‌ನಂಥ ಕೆಲ ಔಷಧಿಗಳ ಬೆಲೆ ಏರಿಕೆಯಾಗಲಿದೆ.

ಎನ್‌ಪಿಪಿಎ ಬಿಡುಗಡೆ ಮಾಡಿದ 127 ಔಷಧಗಳ ಪಟ್ಟಿಯಲ್ಲಿ ಪಾರಾಸೆಟಮೋಲ್, ಅಮೋಕ್ಸಿಲಿನ್, ರಬೆಪ್ರಝೋಲ್ ಮತ್ತು ಮೆಟ್‌ಫೋರ್ಮಲಿನ್ ಸೇರಿವೆ. ಈ ಪೈಕಿ ಬಹುತೇಕ ಔಷಧಿಗಳನ್ನು ರೋಗಿಗಳು ನಿಯತವಾಗಿ ಬಳಸುತ್ತಾರೆ. ಪಾರಾಸೆಟಮೋಲ್ (650ಎಂಜಿ) ಬೆಲೆ ಪ್ರಸ್ತುತ ಪ್ರತಿ ಮಾತ್ರೆಗೆ 2.3 ರೂಪಾಯಿ ಇದ್ದರೆ ಇನ್ನು ಇದು ರೂ. 1.8 ಆಗಲಿದೆ. ಈ ವರ್ಷದ ಆರಂಭದಲ್ಲಿ ಎನ್‌ಪಿಪಿಎ, ಪಾರಾಸೆಟಮೋಲ್ ಬೆಲೆಯನ್ನು ಇಳಿಸಿತ್ತು. ಎಮೋಕ್ಸಲಿನ್ ಮತ್ತು ಪೊಟ್ಯಾಶಿಯಂ ಕ್ಲೌಲನೇಟ್ ಬೆಲೆಯನ್ನು 22.3 ರೂಪಾಯಿಗಳಿಂದ 16.8 ರೂಪಾಯಿಗೆ ಇಳಿಸಲಾಗಿದೆ.

ಮೋಕ್ಸಿಫ್ಲೋಕ್ಸಾಸಿನ್ (400 ಎಂಜಿ) ಬೆಲೆ 31.5 ರೂಪಾಯಿಯಿಂದ 22.8 ರೂಪಾಯಿಗೆ ಇಳಿಯಲಿದೆ. ನ್ಯುಮೋನಿಯಾದಂಥ ಬ್ಯಾಕ್ಟೀರಿಯಾ ಸೋಂಕು ಚಿಕಿತ್ಸೆಗೆ ಬಳಸಲಾಗುವ ಈ ಔಷಧದ ಬೆಲೆಯನ್ನು ವರ್ಷದಲ್ಲಿ ಮೊದಲ ಬಾರಿಗೆ ಇಳಿಸಲಾಗಿದೆ. ಆದರೆ ಮೆಟ್‌ಫಾರ್ಮಿನ್ (500 ಎಂಜಿ) ಬೆಲೆ ರೂ. 1.7 ರಿಂದ 1.8 ರೂಪಾಯಿಗೆ ಹೆಚ್ಚಲಿದೆ. ಇದನ್ನು ಎಲ್ಲ ಬಗೆಯ ಟೈಪ್-2 ಮಧುಮೇಹಕ್ಕೆ ಬಳಸಲಾಗುತ್ತದೆ.

Similar News