ಮೆಸ್ಸಿ ಫ್ರಾನ್ಸ್‌ನ ಪಿಎಸ್‌ಜಿ ಕ್ಲಬ್‌ನಲ್ಲಿಯೇ ಉಳಿದುಕೊಳ್ಳಲಿದ್ದಾರೆಯೇ?: ಇಲ್ಲಿದೆ ಮಾಹಿತಿ

Update: 2022-12-22 10:05 GMT

ಪ್ಯಾರಿಸ್: ಆರ್ಜೆಂಟಿನಾ ತಂಡವನ್ನು ಫಿಫಾ ವಿಶ್ವ ಕಪ್‌ ಪಂದ್ಯದ ಫೈನಲ್‌ನಲ್ಲಿ ವಿಜಯದತ್ತ ಮುನ್ನಡೆಸಿದ ಲಿಯೊನೆಲ್‌ ಮೆಸ್ಸಿ ಫ್ರಾನ್ಸ್‌ನ  ಪ್ಯಾರಿಸ್‌ ಸೈಂಟ್-ಜರ್ಮೈನ್‌ (ಪಿಎಸ್‌ಜಿ) ಫುಟ್ಬಾಲ್‌ ಕ್ಲಬ್‌ನಲ್ಲಿಯೇ ಉಳಿಯಲು ಒಪ್ಪಿದ್ದಾರೆಂದು ವರದಿಗಳು ಹೇಳಿವೆ. ಫ್ರಾನ್ಸ್‌ ತಂಡಕ್ಕೆ ಚಾಂಪಿಯನ್ಸ್‌ ಲೀಗ್‌ ಗೆಲುವಿಗಾಗಿ ಅವರು ಈ ಮೂಲಕ ಶ್ರಮಿಸಲಿದ್ದಾರೆ.

ಮುಂದಿನ ಬೇಸಿಗೆಯಲ್ಲಿ ಪ್ಯಾರಿಸ್‌ ಸೈಂಟ್‌ ಜರ್ಮೈನ್‌ ಫುಟ್ಬಾಲ್‌ ಕ್ಲಬ್‌ ಜೊತೆಗಿನ ಮೆಸ್ಸಿ ಅವರ ಒಪ್ಪಂದ ಅವಧಿ ಅಂತ್ಯಗೊಳ್ಳಲಿದೆಯಾದರೂ ಅದನ್ನು ಅವರು ಇನ್ನೂ ಒಂದು ವರ್ಷ ವಿಸ್ತರಿಸಲಿದ್ದಾರೆಂದು ಹೇಳಲಾಗಿದೆ.

ತಮ್ಮ ವಿಶ್ರಾಂತಿ ಅವಧಿ ಮುಗಿದ ನಂತರ ಮೆಸ್ಸಿ ಅವರು ಪ್ಯಾರಿಸ್‌ ಸೈಂಟ್‌ ಜರ್ಮೈನ್‌ ಅಧ್ಯಕ್ಷ ನಾಸೆರ್‌  ಅಲ್-ಖೆಲೈಪಿ ಮತ್ತು ಕ್ಲಬ್‌ನ ಇತರ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆಂಬ ಮಾಹಿತಿಯಿದೆ.

2021 ರಲ್ಲಿ ಪಿಎಸ್‌ಜಿ ಸೇರಿದ್ದ ಮೆಸ್ಸಿ ಎರಡು ಸೀಸನ್‌ಗೆ ಒಪ್ಪಂದಕ್ಕೆ ಸಹಿ ಹಾಕಿದ್ದರಲ್ಲದೆ ಇನ್ನೂ ಒಂದು ವರ್ಷ ವಿಸ್ತರಿಸುವ ಆಯ್ಕೆಯನ್ನೂ ಉಳಿಸಿಕೊಂಡಿದ್ದಾರೆ. ತಮ್ಮ ಇಡೀ ವೃತ್ತಿಜೀವನವನ್ನು ಅವರು ಬಾರ್ಸಿಲೋನಾ ಕ್ಲಬ್‌ನಲ್ಲಿ ಕಳೆದಿದ್ದಾರೆ.

Similar News