ಚೀನಾದಲ್ಲಿ 10 ಲಕ್ಷ ಕೋವಿಡ್ ಸೋಂಕು; ಪ್ರತಿ ದಿನ 5000 ಮಂದಿ ಮೃತ್ಯು; ವರದಿ

Update: 2022-12-23 04:21 GMT

ಹೊಸದಿಲ್ಲಿ: ಚೀನಾದಲ್ಲಿ ಕೋವಿಡ್-19 ಸಾಂಕ್ರಾಮಿಕ ಅಬ್ಬರಿಸಿದ್ದು, ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷವನ್ನು ದಾಟಿದ್ದು, ಪ್ರತಿ ದಿನ ಐದು ಸಾವಿರ ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ಲೇಷಣಾ ಕಂಪನಿಯೊಂದು ಅಂದಾಜಿಸಿದೆ. ಚೀನಾದ ಕೋವಿಡ್-19 ಸೋಂಕಿನ ಅಂಕಿ ಅಂಶಗಳು ಪಾರದರ್ಶಕವಾಗಿಲ್ಲ ಹಾಗೂ ಕೋವಿಡ್-19 ಸಾವಿನ ಪರಿಗಣನೆಯ ಮಾನದಂಡವನ್ನು ಬದಲಿಸಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ಅಂಕಿ ಅಂಶಗಳು ಬಹಿರಂಗವಾಗಿವೆ ಎಂದು 

ಲಂಡನ್ ಮೂಲದ ಏರ್‌ಫಿನಿಟಿ ಮಾಡಿರುವ ಹೊಸ ಅಂದಾಜಿನಂತೆ, ದೇಶದಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದ್ದು, ಜನವರಿ ಮಧ್ಯಭಾಗದಲ್ಲಿ ಮತ್ತು ಮಾರ್ಚ್ ಮೊದಲ ವಾರದಲ್ಲಿ ಹೀಗೆ ಎರಡು ಬಾರಿ ಪ್ರಕರಣಗಳ ಸಂಖ್ಯೆ ಉತ್ತುಂಗವನ್ನು ತಲುಪಲಿದೆ.

"ಚೀನಾ ಸಮೂಹ ಪರೀಕ್ಷೆಯನ್ನು ಸ್ಥಗಿತಗೊಳಿಸಿದೆ ಹಾಗೂ ರೋಗಲಕ್ಷಣ ಇಲ್ಲದ ಪ್ರಕರಣಗಳನ್ನು ವರದಿ ಮಾಡುತ್ತಿಲ್ಲ. ಇದರಿಂದಾಗಿ ಅಧಿಕೃತ ಅಂಕಿ ಅಂಶಗಳು ಪರಿಸ್ಥಿತಿಯ ನೈಜ ಚಿತ್ರಣವಾಗಿರಲು ಸಾಧ್ಯವಿಲ್ಲ" ಎಂದು ಏರ್‌ಫಿನಿಟಿ ಲಸಕೆಗಳು ಮತ್ತು ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಲೂಯಿಸ್ ಬ್ಲೇರ್ ಹೇಳಿದ್ದಾರೆ.

ಚೀನಾ ತನ್ನ ಶೂನ್ಯ ಕೋವಿಡ್ ನೀತಿಯನ್ನು ಸಡಿಲಿಸಿದಲ್ಲಿ ಚೀನಾದಲ್ಲಿ 13 ಲಕ್ಷದಿಂದ 21 ಲಕ್ಷ ಮಂದಿ ಕೋವಿಡ್-19 ಸೋಂಕಿನಿಂದ ಸಾಯುವ ಅಪಾಯವಿದೆ ಎಂದು ಕಳೆದ ತಿಂಗಳು ಏರ್‌ಫಿನಿಟಿ ಎಚ್ಚರಿಸಿತ್ತು.

Similar News