32 ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ
Update: 2022-12-25 21:24 IST
ಉಡುಪಿ, ಡಿ.25: ಜಿಲ್ಲೆಯಲ್ಲಿ 32 ದಿನಗಳ ಬಳಿಕ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದಾರೆ. ಕಳೆದ ನ.23ರಂದು ಜಿಲ್ಲೆಯಲ್ಲಿ ಕುಂದಾಪುರದ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾದ ಬಳಿಕ 32 ದಿನ ಸತತವಾಗಿ ಕೋವಿಡ್ ಬಾಧಿತ ವ್ಯಕ್ತಿ ಪತ್ತೆಯಾಗಿರಲಿಲ್ಲ. ಅದೇ ರೀತಿ ನ.29ರ ಬಳಿಕ ಜಿಲ್ಲೆ ಕೋವಿಡ್‌ನಿಂದ ಸಂಪೂರ್ಣ ಮುಕ್ತಿ ಪಡೆದಿತ್ತು.
ಇಂದು ಉಡುಪಿಯ ಪುರುಷರೊಬ್ಬರಿಗೆ ಕೋವಿಡ್‌ಗೆ ಸೋಂಕು ದೃಢಪಟ್ಟಿದೆ. ಅವರನ್ನು ಅವರ ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಿನದಲ್ಲಿ ಒಟ್ಟು 73 ಮಂದಿಯನ್ನು ಕೋವಿಡ್‌ಗಾಗಿ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ ಉಡುಪಿ ತಾಲೂಕಿನ 30, ಕುಂದಾಪುರ ತಾಲೂಕಿನ 28 ಹಾಗೂ ಕಾರ್ಕಳ ತಾಲೂಕಿನ 15 ಮಂದಿ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.