×
Ad

ಪುಷ್ಪಕಮಲ ದಹಲ್ ‘ಪ್ರಚಂಡ’ ನೇಪಾಳದ ನೂತನ ಪ್ರಧಾನಿ

Update: 2022-12-25 23:48 IST

ಕಠ್ಮಂಡು, ಡಿ.25: ನೇಪಾಳದ ಹಿಂದು ರಾಜಪ್ರಭುತ್ವದ ವಿರುದ್ಧ ಒಂದು ದಶಕದ ಸುದೀರ್ಘ ದಂಗೆಯನ್ನು ಮುನ್ನಡೆಸಿದ ಮಾಜಿ ಮಾವೋವಾದಿ ಗೆರಿಲ್ಲಾ ಸಂಘಟನೆಯ ಮುಖಂಡ ಪುಷ್ಪಕಮಲ ದಹಲ್ ‘ಪ್ರಚಂಡ’ ದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕಳೆದ ತಿಂಗಳು ನಡೆದ ಸಂಸದೀಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. 275 ಸದಸ್ಯ ಬಲದ ಸಂಸತ್ತಿನಲ್ಲಿ ಪ್ರಚಂಡ ಅವರ ಮಾವೋವಾದಿ ಸೆಂಟರ್ ಪಕ್ಷ 32 ಸ್ಥಾನ ಪಡೆದಿದ್ದರೆ, ಪ್ರಮುಖ ವಿಪಕ್ಷ ‘ಕಮ್ಯುನಿಸ್ಟ್ ಯುನಿಫೈಡ್ ಮಾರ್ಕ್ಸಿಸ್ಟ್ - ಲೆನಿನಿಸ್ಟ್(ಯುಎಂಎಲ್) ಪಕ್ಷ 78 ಸ್ಥಾನ ಪಡೆದಿದೆ. ಈ ಎರಡೂ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡಿದ್ದು ಇತರ ಪಕ್ಷಗಳ ಬೆಂಬಲದಿಂದ ಬಹುಮತಕ್ಕೆ ಅಗತ್ಯವಿರುವ 138 ಸಂಖ್ಯಾಬಲ ಸಾಧಿಸುವ ವಿಶ್ವಾಸದಲ್ಲಿದೆ. ಅಧಿಕಾರ ಹಂಚಿಕೆಯ ಸೂತ್ರದ ಪ್ರಕಾರ 2025ರಲ್ಲಿ ಪ್ರಚಂಡ ಪ್ರಧಾನಿ ಸ್ಥಾನವನ್ನು ಯುಎಂಎಲ್‌ಗೆ ಬಿಟ್ಟುಕೊಡಲಿದ್ದಾರೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Similar News